Webdunia - Bharat's app for daily news and videos

Install App

ಕುಟುಂಬದ ಸದಸ್ಯರ ಮುಂದೆಯೇ ಯುವತಿಯ ಮೇಲೆ ಗ್ಯಾಂಗ್‌ರೇಪ್

Webdunia
ಗುರುವಾರ, 9 ನವೆಂಬರ್ 2023 (14:55 IST)
ಅಕ್ರಮ ಗಾಂಜಾ ಕೂಡಿಟ್ಟಿದ್ದೀರಾ, ತನಿಖೆ ನಡೆಸಬೇಕು ಎಂಬ ನೆಪ ಹೇಳಿ ಪೊಲೀಸರ ವೇಷದಲ್ಲಿ ಏಕಾಯೇಕಿ ಮಹಿಳೆಯ ಮನೆಗೆ ನುಗ್ಗಿದ ನಾಲ್ವರು ಆರೋಪಿಗಳು ಮನೆಯಲ್ಲಿದ್ದ  ಚಿನ್ನಾಭರಣ ಮತ್ತು ಹಣವನ್ನು ದೋಚಿದ್ದಾರೆ. ನಂತರ  ಸೀರೆಯಿಂದ  ಮಹಿಳೆಯ ಪತಿ, ಅತ್ತೆ ಮತ್ತು 9 ವರ್ಷದ ಮಗನನ್ನು ಕಟ್ಟಿ ಹಾಕಿ, ಅವರ ಮುಂದೆಯೇ 26 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ವರದಿಯಾಗಿದೆ.
 
ಪೊಲೀಸರ ಸೋಗಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು, ಪತಿ, ಮಗ ಮತ್ತು ಅತ್ತೆಯ ಮುಂದೆಯೇ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಹೇಯ ಘಟನೆ ದೆಹಲಿಯಲ್ಲಿ ಈ ಘಟನೆ ನಡೆದಿದ್ದು ಬಹಳ ತಡವಾಗಿ ಬೆಳಕಿಗೆ ಬಂದಿದೆ. 
 
ತಮ್ಮ ಕೀಚಕಕೃತ್ಯದ ವಿಡಿಯೋ ಚಿತ್ರೀಕರಣವನ್ನು ಕೂಡ  ಮಾಡಿಕೊಂಡ ಖದೀಮರು ಪೊಲೀಸರಲ್ಲಿ ದೂರು ನೀಡಿದರೆ  ಅತ್ಯಾಚಾರದ ವಿಡಿಯೋ ಬಿಡುಗಡೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ನಾಲ್ವರನ್ನು ಕಟ್ಟಿ ಹಾಕಿದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಪೀಡಿತಳ ಕುಟುಂಬದವರ ಕಿರುಯಾಟವನ್ನು ಕೇಳಿಸಿಕೊಂಡ ನೆರೆಹೊರೆಯವರು ಸ್ಥಳಕ್ಕೆ ಬಂದು ಅವರನ್ನು ರಕ್ಷಿಸಿದ್ದಾರೆ.
 
ಅಕ್ಟೋಬರ್  26 ರಂದು ದಂಪತಿಗಳು ಪೊಲೀಸ್ ಠಾಣೆಯಲ್ಲಿ ತಮ್ಮ ಮನೆಯಲ್ಲಿ ಡಕಾಯಿತಿಯಾಗಿದೆ ಎಂದು ಪ್ರಕರಣ ದಾಖಲಿಸಿದ್ದಾರೆ. ಮರುದಿನ  ಅತ್ಯಾಚಾರವಾಗಿರುವ ಬಗ್ಗೆಯೂ ದೂರು ದಾಖಲಿಸಿದ್ದಾರೆ. 
 
ಪೊಲೀಸರು ಕೆಲವು ಅಪರಾಧಿಗಳ ಭಾವಚಿತ್ರವನ್ನು ತೋರಿಸಿದಾಗ ಅವರಲ್ಲಿ ಒಬ್ಬನನ್ನು ದಂಪತಿಗಳು ಗುರುತಿಸಿದ್ದಾರೆ. ಅದರ ಆಧಾರದ ಮೇಲೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಅನಿಲ್ ಕುಮಾರ್, ನಂದೀಶ್, ಸೈಮನ್, ಸುಜಿತ್ ಎಂದು ಗುರುತಿಸಲಾಗಿದ್ದು ಇವರು ಹಲವಾರು  ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾದ ಆರೋಪಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ  ಬಂಧನಕ್ಕೆ ಒಳಪಡಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments