Publish Date: Sat, 21 Nov 2026 (11:08 IST)
Updated Date: Sat, 21 Nov 2026 (11:11 IST)
ಕೋಟ್ಯಂತರ ಜನರ ಭರವಸೆಯಾಗಿ, ಕಠಿಣ ನಿರ್ಧಾರಗಳ ಮೂಲಕ ಸದಾ ದೃಢವಾಗಿ ನಿಲ್ಲುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ತಾಯಿ ಸಾವಿತ್ರಿ ದೇವಿ ಅವರಿಗೆ ಅಂತಿಮ ವಿದಾಯ ಹೇಳುವಾಗ ಭಾವುಕರಾಗಿ ಕಣ್ಣೀರಿಟ್ಟ ಕ್ಷಣ ಎಂಥವರ ಮನಸ್ಸನ್ನೂ ಕಲಕುವಂತಿತ್ತು.
ವ್ಯಕ್ತಿ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ, ಎಷ್ಟೇ ದೊಡ್ಡ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ನಿಭಾಯಿಸುತ್ತಿದ್ದರೂ, ಜಗತ್ತಿನಲ್ಲಿ ತಾಯಿಗಿಂತ ಮಿಗಿಲಾದವರು ಯಾರೂ ಇಲ್ಲ ಎಂಬ ಸತ್ಯಕ್ಕೆ ಈ ಕ್ಷಣ ಸಾಕ್ಷಿಯಾಯಿತು. ಸದಾ ಸಾರ್ವಜನಿಕ ಸೇವೆ ಮತ್ತು ಆಡಳಿತದ ಜವಾಬ್ದಾರಿಗಳಲ್ಲಿ ಬ್ಯುಸಿಯಾಗಿರುತ್ತಿದ್ದ ಯೋಗಿ ಜೀ, ತಾಯಿಯ ಅಗಲಿಕೆಯ ನೋವಿನಲ್ಲಿ ಒಬ್ಬ ಸಾಮಾನ್ಯ ಮಗನಂತೆ ಭಾವುಕರಾದರು.
ಸರಳತೆ, ಸಂಸ್ಕಾರ ಮತ್ತು ಮೌಲ್ಯಗಳ ಪ್ರತೀಕವಾಗಿದ್ದ ಮಾತೃಶ್ರೀ ಸಾವಿತ್ರಿ ದೇವಿ ಅವರು ತಮ್ಮ ಮಗನಿಗೆ ನೀಡಿದ ಸಂಸ್ಕಾರವೇ ಇಂದು ಅವರನ್ನು ಈ ಎತ್ತರಕ್ಕೆ ಬೆಳೆಸಿದೆ. ತಾಯಿಯ ಅಗಲಿಕೆಯ ಈ ದುಃಖದ ಸಂದರ್ಭದಲ್ಲಿ ಇಡೀ ದೇಶವೇ ಯೋಗಿ ಆದಿತ್ಯನಾಥ್ ಮತ್ತು ಅವರ ಕುಟುಂಬದ ನೋವಿನಲ್ಲಿ ಭಾಗಿಯಾಗಿದೆ.
ಮಾತೃಶ್ರೀ ಸಾವಿತ್ರಿ ದೇವಿ ಅವರ ಪವಿತ್ರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಾ, ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸೋಣ. ಓಂ ಶಾಂತಿ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ