Select Your Language

Notifications

webdunia
webdunia
webdunia
webdunia

ಪುತ್ರಿಯರು ಮಿಲಿಟರಿ ಸೇರಬಯಸಿದರೆ ಹೆಮ್ಮೆ: ಒಬಾಮಾ

ಪುತ್ರಿಯರು ಮಿಲಿಟರಿ ಸೇರಬಯಸಿದರೆ ಹೆಮ್ಮೆ: ಒಬಾಮಾ
ವಾಷಿಂಗ್ಟನ್ , ಗುರುವಾರ, 29 ಸೆಪ್ಟಂಬರ್ 2016 (18:49 IST)
ನನ್ನ ಪುತ್ರಿಯರು ಸೈನ್ಯ ಸೇರ ಬಯಸಿದರೆ ನಾನು ಹೆಮ್ಮೆ ಪಡುತ್ತೇನೆ ಎಂದು ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ. ಜತೆಗೂ ಈ ಬೆಳವಣಿಗೆ ನನ್ನಲ್ಲಿ ಆತಂಕವನ್ನು ಸಹ ಹುಟ್ಟಿಹಾಕಬಹುದು ಎಂದು ಅವರು ಒಪ್ಪಿಕೊಂಡಿದ್ದಾರೆ.

ವರ್ಜಿನಿಯಾದ ಮಿಲಿಟರಿ ಪುರಭವನದಲ್ಲಿ ಮಾತನಾಡುತ್ತಿದ್ದ ಒಬಾಮಾ, ನನ್ನ ಪುತ್ರಿಯರಾದ ಮಲಿಯಾ ಮತ್ತು ಸಾಶಾ ಸೈನ್ಯಕ್ಕೆ ಸೇರ್ಪಡೆಯಾಗಲು ಬಯಸಿದರೆ ನಾನು ಅಭಿಮಾನ ಪಡುತ್ತೇನೆ ಎಂದರು.  
 
ಈ ಸಂಭವನೀಯತೆ ನನ್ನನ್ನು ಆತಂಕಕ್ಕೆ ದೂಡುವುದಿಲ್ಲ ಎಂದು ಹೇಳಿದರೆ ಸುಳ್ಳಾಗುತ್ತದೆ. ನಿಮಗೆ ಗೊತ್ತು ನಿಮ್ಮ ಮಕ್ಕಳು ನಿಮ್ಮ ಮಕ್ಕಳೇ. ಆದರೆ ತಮ್ಮ ಮಕ್ಕಳು ಸೈನ್ಯ ಸೇರುವುದನ್ನು ಕಂಡಿರುವ ಪ್ರತಿ ತಂದೆ-ತಾಯಿ ಹೆಮ್ಮೆ ಪಡುತ್ತಾರೆ ಎಂದು ನಾನು ಅಂದುಕೊಂಡಿದ್ದೇನೆ ಎಂದು ಒಬಾಮಾ ಹೇಳಿದ್ದಾರೆ.
 
ನಿಮ್ಮ ಪುತ್ರಿಯರು ಮಿಲಿಟರಿ ಸೇರಲು ಆಸಕ್ತಿ ತೋರಿದರೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಕೇಳಲಾದ ಪ್ರಶ್ನೆಗೆ ಒಬಾಮಾ ಉತ್ತರಿಸುತ್ತಿದ್ದರು. ಆ ಪ್ರಶ್ನೆ ಎದುರಾದಾಗ ಮುಂದುವರೆಯಿರಿ ಎನ್ನುತ್ತೇನೆ ಎಂಬುದು ಅವರಿಂದ ಬಂದ ಉತ್ತರವಾಗಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .

Share this Story:

Follow Webdunia kannada

ಮುಂದಿನ ಸುದ್ದಿ

ಐದು ರಾಷ್ಟ್ರಗಳಿಗೆ ಸೀಮಿತ ದಾಳಿ ಬಗ್ಗೆ ಮೊದಲೇ ವಿವರಣೆ ನೀಡಿದ್ದ ಭಾರತ