Daily Horoscope

Select Your Language

Notifications

webdunia
webdunia
webdunia
webdunia

ನಿರುದ್ಯೋಗ ಹೆಚ್ಚಳಕ್ಕೆ ದುಡಿಯುವ ಮಹಿಳೆಯರೇ ಕಾರಣ: ಪಠ್ಯಪುಸ್ತಕದಲ್ಲಿ ಎಡವಟ್ಟು

working woman
ಛತ್ತೀಸ್‌ಗಢದ 10 ನೇ ತರಗತಿಯ ಪಠ್ಯಪುಸ್ತಕದ ಭಾಗದಲ್ಲಿ ನಿರುದ್ಯೋಗ ಹೆಚ್ಚಳಕ್ಕೆ ದುಡಿಯುವ ಮಹಿಳೆಯೇ ಕಾರಣವೆಂದು ಪ್ರಕಟಿಸಿರುವುದು ಬೆಳಕಿಗೆ ಬಂದಿದ್ದು, ಬಿಜೆಪಿ ಸರ್ಕಾರ ತೀವ್ರ ಮುಜುಗರಪಡುವಂತಾಗಿದೆ. ಛತ್ತೀಸ್‌ಗಢ ಪ್ರೌಢಶಿಕ್ಷಣ ಮಂಡಳಿ ಪ್ರಕಟಿಸಿದ ಪಠ್ಯಪುಸ್ತಕದಲ್ಲಿ ಸ್ವಾತಂತ್ರ್ಯದ ಬಳಿಕ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಉದ್ಯೋಗ ಮಾಡಲು ಆರಂಭಿಸಿದ ಬಳಿಕ ನಿರುದೋಗ್ಯದ ಪ್ರಮಾಣ ಹೆಚ್ಚಿದೆ ಎಂದು ಪ್ರಸ್ತಾಪಿಸಲಾಗಿದೆ. 
 
ಆದಾಗ್ಯೂ ಈ ವಿಷಯವನ್ನು ಜಸ್‌ಪುರ್ ಜಿಲ್ಲೆಯ ಶಿಕ್ಷಕಿರೊಬ್ಬರು ಗಂಭೀರವಾಗಿ ಪರಿಗಣಿಸಿ, ರಾಜ್ಯ ಮಹಿಳಾ ಆಯೋಗಕ್ಕೆ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ.ಅವರ ಅರ್ಜಿಯನ್ನು ಪರಿಗಣಿಸಿದ ಆಯೋಗವು ಮುಖ್ಯಮಂತ್ರಿ ರಮಣ್ ಸಿಂಗ್ ಬಳಿ ಈ ವಿಷಯವನ್ನ ಪ್ರಸ್ತಾಪಿಸುವುದಾಗಿ ತಿಳಿಸಿದೆ.

ಪಠ್ಯಪುಸ್ತಕಗಳಲ್ಲಿ ಸತ್ಯಾಂಶಗಳನ್ನು ತಿರುಚಿ ಬರೆದಿರುವುದು ಇದು ಮೊದಲನೇ ಘಟನೆಯಲ್ಲ. 2014ರಲ್ಲಿ ಪಶ್ಚಿಮಬಂಗಾಳ ಶಾಲಾ ಪಠ್ಯಪುಸ್ತಕಗಳಲ್ಲಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರನ್ನು ಭಯೋತ್ಪಾದಕರು ಎಂದು ಬಿಂಬಿಸಿದ ಬಳಿಕ ಪಶ್ಚಿಮ ಬಂಗಾಳದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
 
8ನೇ  ತರಗತಿಯ ಇತಿಹಾಸ ಪಠ್ಯಗಳಲ್ಲಿ ಕುದಿರಾಮ್ ಬೋಸ್, ಜತೀಂದ್ರನಾಥ್ ಮುಖರ್ಜಿ ಮತ್ತು ಪ್ರಫುಲ್ಲಾ ಚಾಕಿ ಮುಂತಾದ ಸ್ವಾತಂತ್ರ್ಯ ಹೋರಾಟಗಾರರ ಚಟುವಟಿಕೆಗಳನ್ನು ಉಗ್ರವಾದ ಮತ್ತು ಭಯೋತ್ಪಾದನೆ ಎಂದು ಬಣ್ಣಿಸಲಾಗಿತ್ತು.
 
2013ರಲ್ಲಿ ಭಾರತದ ನಕ್ಷೆಯಿಂದ ಅರುಣಾಚಲ ಪ್ರದೇಶವನ್ನು ಹೊರಗಿರಿಸಿದ 10ನೇ ತರಗತಿಯ ಭೂಗೋಳ ಪಠ್ಯಪುಸ್ತಕಗಳ ವಾಪಸಾತಿಗೆ ಮಹಾರಾಷ್ಟ್ರ ಸರ್ಕಾರ ಆದೇಶಿಸಿತ್ತು. 
 
2012ರಲ್ಲಿ ಸಿಬಿಎಸ್‌ಸಿ ಶಾಲೆಯ ಪಠ್ಯಪುಸ್ತಕದಲ್ಲಿ ಮಾಂಸಾಹಾರಿಗಳು ಸುಳ್ಳುಹೇಳುತ್ತಾರೆ, ವಂಚಿಸುತ್ತಾರೆ ಮತ್ತು ಅಪರಾಧಗಳನ್ನು ಎಸಗುತ್ತಾರೆ ಎಂದು ಪ್ರತಿಪಾದಿಸಿತ್ತು.  ಮಹಿಳಾ ಸಬಲೀಕರಣ ಮತ್ತು ಲಿಂಗ ಸಮಾನತೆಗೆ ಒತ್ತು ನೀಡಿರುವ ಮೋದಿ ನೇತೃತ್ವದ ಸರ್ಕಾರಕ್ಕೆ ಛತ್ತೀಸ್‌ಗಢದ ಪಠ್ಯಪುಸ್ತಕ ಘಟನೆಯು ಅಣಕವಾಗಿದಂತಾಗಿದೆ. 
 

Share this Story:

Follow Webdunia kannada