Select Your Language

Notifications

webdunia
webdunia
webdunia
webdunia

ಭಾರತೀಯ ಸೇನೆಯನ್ನು ರಾಜಕೀಯಕ್ಕೆ ಬಳಸುವುದಕ್ಕೆ ನಾನು ಬೆಂಬಲಿಸುವುದಿಲ್ಲ: ರಾಹುಲ್ ಗಾಂಧಿ

ಭಾರತೀಯ ಸೇನೆಯನ್ನು ರಾಜಕೀಯಕ್ಕೆ ಬಳಸುವುದಕ್ಕೆ ನಾನು ಬೆಂಬಲಿಸುವುದಿಲ್ಲ: ರಾಹುಲ್ ಗಾಂಧಿ
ನವದೆಹಲಿ , ಶುಕ್ರವಾರ, 7 ಅಕ್ಟೋಬರ್ 2016 (18:59 IST)
ಪ್ರಧಾನಿ ಮೋದಿ ಸೈನಿಕರ ಬಲಿದಾನವನ್ನು ರಾಜಕೀಕರಣಗೊಳಿಸುತ್ತಿದ್ದಾರೆ ಎಂದು ನಿನ್ನೆಯಷ್ಟೇ ಆರೋಪಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ಮತ್ತೀಗ ಸೀಮಿತ ದಾಳಿಯಲ್ಲಿ ನಿಮ್ಮ ಪಾತ್ರವೇನು ಎಂಬುದನ್ನು ಸ್ಪಷ್ಟಪಡಿಸಿ ಎಂದು ಪ್ರಧಾನಿಯವರಲ್ಲಿ ಕೇಳಿದ್ದಾರೆ. 

ನಾನು ಸೀಮಿತ ದಾಳಿಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ಆದರೆ ಭಾರತೀಯ ಸೇನೆಯನ್ನು ರಾಜಕೀಯ ಪೋಸ್ಟರ್ ಮತ್ತು ಪ್ರಚಾರದಲ್ಲಿ ಬಳಸುವುದನ್ನು ನಾನು ಬೆಂಬಲಿಸುವುದಿಲ್ಲ ಎಂದು ರಾಹುಲ್ ಹೇಳಿದ್ದಾರೆ. 
 
ಸೆಪ್ಟೆಂಬರ್ 29 ರಂದು ಸೀಮಿತ ದಾಳಿ ನಡೆಸಲಾಗಿದೆ ಎಂದು ಭಾರತೀಯ ಸೇನೆ ಘೋಷಿಸಿದ ದಿನ ರಾಹುಲ್, ಕಾಂಗ್ರೆಸ್ ಪಕ್ಷ ಮತ್ತು ನಾನು ಭಾರತೀಯ ಸೇನೆಗೆ ವಂದಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು.
 
ಆದರೆ ಗುರುವಾರ ದೆಹಲಿಯಲ್ಲಿ ನಡೆದ ಮೆರವಣಿಗೆಯಲ್ಲಿ ಮಾತನಾಡುತ್ತ, ನೀವು ಜಮ್ಮು ಮತ್ತು ಕಾಶ್ಮೀರದಲ್ಲಿ ಸೀಮಿತ ದಾಳಿ ನಡೆಸಿದ ಸೈನಿಕರ ರಕ್ತದ ಹಿಂದೆ ಅವಿತುಕೊಳ್ಳುತ್ತೀರಿ. ನೀವು ಬಲಿದಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಿರಿ. ಇದು ತಪ್ಪು. ಸೈನ್ಯ ದೇಶಕ್ಕಾಗಿ ಏನನ್ನು ಮಾಡಬೇಕೋ ಮಾಡಿದೆ. ನೀವು ನಿಮ್ಮ ಕೆಲಸವನ್ನು ಮಾಡಿರಿ. ನೀವು ಸರ್ಕಾರ ನಡೆಸಲು ಆಯ್ಕೆಯಾಗಿದ್ದಿರಿ ಎಂದು ಕಿಡಿಕಾರಿದ್ದರು. 
 
ಈ ಹೇಳಿಕೆಯನ್ನು ಬಲವಾಗಿ ಖಂಡಿಸಿದ್ದ ಬಿಜೆಪಿ ಇದು ಅತ್ಯಂತ ನಾಚಿಗೇಡು ಹೇಳಿಕೆ, ರಾಹುಲ್ ಅವರ ಮಾನಸಿಕ ದಿವಾಳಿತನವನ್ನು ಇದು ಪ್ರತಿಬಿಂಬಿಸುತ್ತದೆ ಎಂದಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಖ್ಯಾತ ಪರಫ್ಯೂಮ್ ತಜ್ಞೆ ಮೋನಿಕಾ ಗುರ್ಡೆಯ ನಗ್ನ ಮೃತದೇಹ ಪತ್ತೆ