Select Your Language

Notifications

webdunia
webdunia
webdunia
webdunia

ಅಕ್ರಮ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ ಪತಿಯನ್ನ ಕೊಂದು ಮರಕ್ಕೆ ನೇತು ಹಾಕಿದ ಪತ್ನಿ

ಅಕ್ರಮ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ ಪತಿಯನ್ನ ಕೊಂದು ಮರಕ್ಕೆ ನೇತು ಹಾಕಿದ ಪತ್ನಿ
ಲೂಧಿಯಾನಾ , ಶನಿವಾರ, 1 ಏಪ್ರಿಲ್ 2017 (13:22 IST)
ಕಾಮಕ್ಕೆ ಕಣ್ಣಿಲ್ಲ ಎಂಬ ಮಾತನ್ನ ಇಂತಹ ಘಟನೆಗಳನ್ನ ನೊಡಿಯೇ ಹೇಳಿರಬೇಕು. ಪರ ಪುರುಷನ ಜೊತೆ ಅಕ್ರಮ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ ಪತಿಯನ್ನ ಪತ್ನಿ ತನ್ನ ಪ್ರಿಯಕರನ ಜೊತೆ ಸೇರಿ ಕೊಂದು ಮರಕ್ಕೆ ನೇತು ಹಾಕಿರುವ ಘಟನೆ ಯೂಧಿಯಾನಾದಿಂದ 50 ಕಿ.ಮೀ ದೂರದ ಭೈನಿ ದರೇರಾ ಹಳ್ಳಿಯಲ್ಲಿ ನಡೆದಿದೆ.
 

ಹತ್ಯೆಗೀಡಾದ ಜಗ್ಪಾಲ್ ಸಿಂಗ್ ಮದ್ಯ ಮಾರಾಟ ಉದ್ಯಮಿಯಾಗಿದ್ದು, ಈತನ ಪತ್ನಿ ಹರ್ಜೀತ್ ಕೌರ್ ಮತ್ತು ಮದ್ಯದಂಗಡಿ ಮಾಲೀಕ ದೇವಿಂದರ್ ಸಿಂಗ್ ನಡುವೆ ಸಂಬಂಧ ಬೆಳೆದಿತ್ತು. ವ್ಯವಹಾರಕ್ಕಾಗಿ ಆಗಾಗ್ಗೆ ಮನೆಗೆ ಬರುತ್ತಿದ್ದ ದೇವಿಂದರ್ ಹರ್ಜೀತ್ ಜೊತೆ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದ.

ನಾಲ್ಕೈದು ತಿಂಗಳ ಪತ್ನಿ, ಪರಪುರುಷನ ಜೊತೆ ಮಂಚ ಹತ್ತುತ್ತಿರುವುದನ್ನ ಪತ್ತೆ ಹಚ್ಚಿದ ಪತಿ ಆಕ್ಷೇಪ ಎತ್ತಿ ಜಗಳ ತೆಗೆದಿದ್ದಾನೆ. ಪತಿಯ ವಿರೋಧದ ಬಗ್ಗೆ ಹರ್ಜೀತ್ ಪ್ರಿಯಕರನಿಗೆ ತಿಳಿಸಿದ್ದಾಳೆ. ಹರ್ಜೀತ್ ಪತಿಗೆ ಸ್ಕೆಚ್ ಹಾಕಿದ ಪ್ರಿಯಕರ ದೇವಿಂದರ್ ಬುಧವಾರ ರಾತ್ರಿ ತನ್ನ ಮೂವರು ಸಹಚರರೊಂದಿಗೆ ಮನೆಗೆ ನುಗ್ಗಿ ಜಗ್ಪಾಲ್ ಸಿಂಗ್ ಅವರನ್ನ ಕೊಂದು ಸಮೀಪದ ಮರಕ್ಕೆ ನೇತು ಹಾಕಿದ್ದಾರೆ.

ಪ್ರಕರಣ ಸಂಬಂದ ಲಜ್ಜೆಗೆಟ್ಟ ಪತ್ನಿ ಹರ್ಜೀತ್, ಪ್ರಿಯಕರ್ ದೇವಿಂದರ್ ಸೇರಿ ನಾಲ್ವರನ್ನ ಬಂಧಿಸಿರುವ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಪುತ್ರ ಯತೀಂದ್ರ ಕಾರು ಸೀಜ್ ಮಾಡಿದ ಚುನಾವಣಾಧಿಕಾರಿಗಳು