Select Your Language

Notifications

webdunia
webdunia
webdunia
webdunia

ನಾರಿಯರ ಸಬಲೀಕರಣ , ಮಹಿಳೆಯರಿಗೆ ಆರ್ಥಿಕ ಶಕ್ತಿ

ನಿರ್ಮಲಾ ಸೀತಾರಾಮನ್‌

geetha

navadehali , ಶುಕ್ರವಾರ, 2 ಫೆಬ್ರವರಿ 2024 (18:20 IST)
ನವದೆಹಲಿ :  ಈ ಬಾರಿಯ ಮಧ್ಯಂತರ ಬಜೆಟ್‌ ನಲ್ಲಿ ಭಾರೀ ಘೋಷಣೆಗಳನ್ನೇ ಮಾಡಲಾಗಿದೆ.ಮಧ್ಯಂತರ ಬಜೆಟ್‌ ಮಂಡಿಸಿದ ವಿತ್ತಸಚಿವೆ ನಿರ್ಮಲಾ ಸೀತಾರಾಮನ್‌, ಮಹಿಳೆಯರು ಘನತೆಯಿಂದ ಬದುಕುವಂತೆ ಮಾಡಿರುವುದು ನಮ್ಮ ಹತ್ತು ವರ್ಷದ ಸಾಧನೆ ಎಂದರು. 
 
30 ಕೋಟಿಗೂ ಹೆಚ್ಚು ಮಹಿಳೆಯರಿಗೆ ಉದ್ಯಮ ಆರಂಭಿಸಲು ಮುದ್ರಾ ಯೋಜನೆಯಡಿ ಸಾಲ ನೀಡಲಾಗಿದೆ.   
ಉನ್ನತ ವಿದ್ಯಾಭ್ಯಾಸದಲ್ಲಿ ಕಳೆದ ಹತ್ತುವರ್ಷಗಳ ಮಹಿಳೆಯರ ಸಾಧನೆ  ಶೇ 28 ರಷ್ಟು ಹೆಚ್ಚಳವಾಗಿದೆ
ಉದ್ಯೋಗ ಕ್ಷೇತ್ರದಲ್ಲಿಯೂ ಮಹಿಳೆಯರ ಪ್ರಮಾಣ ಶೇ 43 ರಷ್ಟು ಹೆಚ್ಚಳವಾಗಿದೆ. 
ಮಹಿಳೆಯರು ಸ್ವಾಭಿಮಾನದಿಂದ ಬದುಕಲು ತ್ರಿವಳಿ ತಲಾಖ್‌ ಗೆ ವಿದಾಯ ಹೇಳಲಾಗಿದೆ. 
ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೂ ಆಯುಷ್ಮಾನ್‌ ಭಾರತ್‌ ಯೋಜನೆಯನ್ನು ವಿಸ್ತರಿಸಲಾಗಿದೆ.
ಗರ್ಭಿಣಿಯರು ಹಾಗೂ ಬಾಣಂತಿಯರ ಯೋಗಕ್ಷೇಮಕ್ಕಾಗಿ ಸಕ್ಷಮ ಅಂಗನವಾಡಿ ಪೋಷಣ 2.0 ಕಾರ್ಯಕ್ರಮ ಕೈಗೊಳ್ಳಲಾಗಿದೆ. 
U-Win ವೇದಿಕೆಯಡಿಯಲ್ಲಿ ಮಿಷನ್ ಇಂಧ್ರಧನುಷ್‌ ಎಂಬ ಯೋಜನೆ ರೂಪಿಸಲಾಗಿದೆ. 
ಲಖ್‌ ಪತಿ ದೀದಿ ಯೋಜನೆಯ ಅಡಿಯಲ್ಲಿ 83 ಎಸ್‌ಎಚ್‌ಜಿ ಗ ಳುಮತ್ತು 9  ಕೋಟಿ ಮಹಿಳೆಯರು ಸಹಾಯ ಪಡೆದಿದ್ದಾರೆ. ಈಗಾಗಲೇ ಒಂದು ಕೋಟಿ ಮಹಿಳೆಯರು ಫಲಾನುಭವಿಗಳಾಗಿದ್ದು, ಮುಂ ದಿನವರ್ಷದಲ್ಲಿ ಈ ಗುರಿತಯನ್ನು 2 ರಿಂದ 3 ಕೋಟಿಗೆ ಹೆಚ್ಚಿಸಲಾಗಿದೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲರನ್ನೂ ಒಳಗೊಳ್ಳುವ ಮುನ್ನೋಟವುಳ್ಳ ಬಜೆಟ್‌ - ಪ್ರಧಾನಿ ಮೋದಿ