Select Your Language

Notifications

webdunia
webdunia
webdunia
webdunia

ಪುರುಷ ಟೈಲರ್ ಗಳು ಇನ್ಮೇಲೆ ಮಹಿಳಾ ಗ್ರಾಹಕರ ಅಳತೆ ತೆಗೆಯುವಂತಿಲ್ಲ

Sewing machine

Krishnaveni K

ಲಕ್ನೋ , ಶುಕ್ರವಾರ, 8 ನವೆಂಬರ್ 2024 (15:24 IST)
ಲಕ್ನೋ: ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಹಿಳಾ ಆಯೋಗ ಇನ್ನು ಮುಂದೆ ಪುರುಷ ಟೈಲರ್ ಗಳು ಮಹಿಳೆಯರ ಬಟ್ಟೆ ಅಳತೆ ತೆಗೆಯುವಂತಿಲ್ಲ ಎಂದಿದೆ. ಇಂತಹದ್ದೊಂದು ಪ್ರಸ್ತಾವನೆ ಮಾಡಿರುವುದು ಉತ್ತರ ಪ್ರದೇಶ ಮಹಿಳಾ ಆಯೋಗ.

ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಕೆಲವೊಂದು ಸಲಹೆಗಳನ್ನು ಮಹಿಳಾ ಆಯೋಗ ಸರ್ಕಾರದ ಮುಂದಿಟ್ಟಿದೆ. ಟೈಲರ್ ಗಳ ವಿಚಾರ ಮಾತ್ರವಲ್ಲದೆ, ಮಹಿಳೆಯರ ಸುರಕ್ಷತೆಗೆ ಹಲವು ಅಂಶಗಳನ್ನು ಮಹಿಳಾ ಆಯೋಗ ಸಲಹೆ ನೀಡಿದೆ. ಇದನ್ನು ಸರ್ಕಾರ ಜಾರಿಗೆ ತರುತ್ತಾ ನೋಡಬೇಕಿದೆ.

ಮಹಿಳಾ ಗ್ರಾಹಕರ ಬಟ್ಟೆ ಅಳತೆಯನ್ನು ಪುರುಷ ಟೈಲರ್ ಗಳು ಪಡೆಯವಂತಿಲ್ಲ. ಜಿಮ್ ಗಳಿಗೆ ಬರುವ ಮಹಿಳೆಯರಿಗೆ ಪುರುಷ ಟ್ರೈನರ್ ಗಳು ತರಬೇತಿ ನೀಡುವಂತಿಲ್ಲ. ಶಾಲೆ, ಕಾಲೇಜು ವಾಹನಗಳಲ್ಲಿ ಮಹಿಳಾ ಭದ್ರತಾ ಸಿಬ್ಬಂದಿ ಇರಬೇಕು. ಬಟ್ಟೆ ಅಂಗಡಿಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಸಿಬ್ಬಂದಿಗಳನ್ನು ನೇಮಿಸಬೇಕು ಎಂಬಿತ್ಯಾದಿ ಸಲಹೆಗಳನ್ನು ಮುಂದಿಟ್ಟಿದೆ.

ಇದೀಗ ಈ ಸಲಹೆಗಳು ಪ್ರಸ್ತಾವನೆ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಅನುಮೋದನೆ ಪಡೆದುಕೊಂಡು ಸರ್ಕಾರದ ಮುಂದೆ ವಿಸ್ತೃತ ವರದಿ ಸಲ್ಲಿಸಲಾಗುತ್ತದೆ. ಅದಕ್ಕ ತಕ್ಕಂತೆ ಸರ್ಕಾರ ಮಹಿಳೆಯರ ಸುರಕ್ಷತೆಗೆ ಕ್ರಮ ಕೈಗೊಳ್ಳಬಹುದು ಎಂದು ಮಹಿಳಾ ಆಯೋಗದ ಸದಸ್ಯರೊಬ್ಬರು ಹೇಳಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುಎಸ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಟ್ರಂಪ್‌, ಸೋತ ಕಮಲಾ ಹ್ಯಾರಿಸ್‌ಗೆ ರಾಹುಲ್ ಗಾಂಧಿ ಪತ್ರ