Select Your Language

Notifications

webdunia
webdunia
webdunia
webdunia

ಮತ್ತೊಂದು ಮದುವೆಯಾಗಿದ್ದಕ್ಕೆ ಪತಿಯ ಮೇಲೆ ಆ್ಯಸಿಡ್ ಎರಚಿ ಪ್ರತೀಕಾರ

ಮತ್ತೊಂದು ಮದುವೆಯಾಗಿದ್ದಕ್ಕೆ ಪತಿಯ ಮೇಲೆ ಆ್ಯಸಿಡ್ ಎರಚಿ ಪ್ರತೀಕಾರ
ಜಮ್ಮು , ಶನಿವಾರ, 24 ಸೆಪ್ಟಂಬರ್ 2016 (13:06 IST)
ಪತಿ ಮತ್ತೊಂದು ಮದುವೆಯಾಗಿದ್ದಾನೆ ಎಂಬ ಕೋಪದಲ್ಲಿ ಸಹನೆ ಕಳೆದುಕೊಂಡ ಪತ್ನಿ ಆತನ ಮೇಲೆ ಆ್ಯಸಿಡ್ ಎರಚಿ ಪ್ರತೀಕಾರ ತೀರಿಸಿಕೊಂಡ ಹೇಯ ಘಟನೆ ಜಮ್ಮುವಿನ ಕಥುರಾ ಜಿಲ್ಲೆಯಲ್ಲಿ ನಡೆದಿದೆ.

ಶಮೀಮಾ ಅಕ್ತರ್, ತನ್ನ ಮಗಳು ಮತ್ತು ಮತ್ತಿಬ್ಬರ ಸಹಾಯದೊಂದಿಗೆ ವೃತ್ತಿಯಲ್ಲಿ ಪೊಲೀಸ್ ಪೇದೆಯಾಗಿರುವ ಮೊಹಮ್ಮದ್ ದಿನ್ ಮೇಲೆ ದಾಳಿ ನಡೆಸಿದ್ದು, ಗಂಭೀರ ಸ್ಥಿತಿಯಲ್ಲಿರುವ ಆತನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬನಿ ಪೊಲೀಸ್ ಠಾಣಾಧಿಕಾರಿ ಸುರೇಶ್ ಗೌತಮ್ ತಿಳಿಸಿದ್ದಾರೆ. 
 
ದಿನ್ ಮತ್ತು ಶಮೀಮಾ ಅಕ್ತರ್ ಕಳೆದ 10 ವರ್ಷಗಳ ಹಿಂದೆ ವಿವಾಹವಾಗಿದ್ದರು. ಇತ್ತೀಚಿಗೆ ದಿನ್ ಮತ್ತೊಂದು ಮದುವೆಯಾಗಿದ್ದ. ಇದೇ ಈ ಪೈಶಾಚಿಕ ಕೃತ್ಯಕ್ಕೆ ಕಾರಣವಾಯ್ತು ಎಂದು ತಿಳಿದು ಬಂದಿದೆ.
 
ಘಟನೆಯಲ್ಲಿ ಅಕ್ತರ್ ಕೂಡ ಗಾಯಗೊಂಡಿದ್ದು, ಅವರಿಬ್ಬರನ್ನು ಮೊದಲು ಕಥುವಾದ ಉಪ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಪತಿಯ ಪರಿಸ್ಥಿತಿ ಚಿಂತಾಜನಕವಾಗಿದ್ದರಿಂದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಸಚಿವನಿಂದ ದೆಹಲಿಯಲ್ಲಿ ಸೆಕ್ಸ್ ರಾಕೆಟ್: ಸ್ವಾತಿ ಮಲಿವಾಲ್