Select Your Language

Notifications

webdunia
webdunia
webdunia
webdunia

ಪ್ರೀತಿಸಿ ಕೈಕೊಟ್ಟವನ ಮುಖಕ್ಕೆ ಆಸಿಡ್ ಎರಚಿ ಹತ್ಯೆಗೈದ ಪ್ರಿಯತಮೆ

ಪ್ರೀತಿಸಿ ಕೈಕೊಟ್ಟವನ ಮುಖಕ್ಕೆ ಆಸಿಡ್ ಎರಚಿ ಹತ್ಯೆಗೈದ ಪ್ರಿಯತಮೆ
ಗುಂಟೂರು , ಬುಧವಾರ, 24 ಮೇ 2017 (20:21 IST)
ಪ್ರೀತಿಸಿ ಕೈಕೊಟ್ಟು ಬೇರೆ ಯುವತಿಯನ್ನು ವಿವಾಹವಾದ ಮಾಜಿ ಪ್ರಿಯಕರನ ಮುಖಕ್ಕೆ ಮಹಿಳೆಯೊಬ್ಬಳು ಆಸಿಡ್ ಎರಚಿ ಹತ್ಯೆಗೈದ ದಾರುಣ ಘಟನೆ ವೆನಿಗಂಡ್ಲಾ ಗ್ರಾಮದಲ್ಲಿ ವರದಿಯಾಗಿದೆ.
 
ಆಸಿಡ್‌ನಿಂದ ಗಂಬೀರವಾಗಿ ಗಾಯಗೊಂಡ ಯುವಕನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
   
ಗುಂಟುರ್ ಜಿಲ್ಲೆಯ ತಡಿಕೊಂಡಾ ಮಂಡಲ್ ವ್ಯಾಪ್ತಿಯ ಪಾಮಲಾಪಾಡು ಗ್ರಾಮದ ಇಲಿಯಾಸ್ ಮತ್ತು ವೆನಿಗುಂಡ್ಲಾ ಗ್ರಾಮದ ಹಿಮಾ ಬಿಂದು ನಡುವೆ ನಾಲ್ಕು ವರ್ಷದಿಂದ ಸಂಬಂಧವಿತ್ತು. ಖಾಸಗಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿರುವಾಗ ಇಲಿಯಾಸ್ ಮತ್ತು ಬಿಂದು ಗೆಳೆಯರಾಗಿದ್ದರು. ನಂತರ ಗೆಳೆತನ ಪ್ರೇಮಕ್ಕೆ ತಿರುಗಿತ್ತು ಎನ್ನಲಾಗಿದೆ. 
 
ಇಲಿಯಾಸ್ ಬೇರೆ ಯುವತಿಯೊಂದಿಗೆ ವಿವಾಹವಾಗಿದ್ದರಿಂದ ಆಕ್ರೋಶಗೊಂಡ ಹಿಮಾ, ಇಲಿಯಾಸ್‌ನನ್ನು ಭೇಟಿಯಾಗುವಂತೆ ಕೋರಿದ್ದಾಳೆ. ಪ್ರಿಯಕರನ ವಂಚನೆಯಿಂದ ಆಕ್ರೋಶಗೊಂಡಿದ್ದ ಆಕೆ ಭೇಟಿಯಾಗಲು ಬಂದ ಇಲಿಯಾಸ್‌ ಮುಖದ ಮೇಲೆ ಆಸಿಡ್ ಎರಚಿದ್ದಾಳೆ. ಕಾಕನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಹೀಮಾ ಬಿಂದು ಪರಾರಿಯಾಗಿದ್ದಾಳೆ.  
 
ಮಂಗಲಗಿರಿ ಸಿ.ಐ ಬ್ರಹ್ಮಯ್ಯ ಅವರು ಯುವತಿಯ ಬಂಧನಕ್ಕಾಗಿ ಎರಡು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ. ಹೀಮಾಳ ಕೃತ್ಯಕ್ಕಾಗಿ ನೆರವು ನೀಡಿದ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.  
 
ಇಲಿಯಾಸ್ ವಿವಾಹವಾಗುವ ಒಂದು ದಿನ ಮುಂಚೆ ಹೀಮಾ , ಇಲಿಯಾಸ್ ಸಹೋದರ ಅಲ್ಲಾಭಕ್ಷುನನ್ನು ಭೇಟಿಯಾಗಿ ತಮ್ಮ ಸಂಬಂಧವನ್ನು ವಿವರಿಸಿ ತನ್ನ ಭವಿಷ್ಯದ ಬಗ್ಗೆ ಪ್ರಶ್ನಿಸುವವರೆಗೂ ನಮಗೆ ಇಬ್ಬರ ನಡುವಿನ ಸಂಬಂಧ ತಿಳಿದಿರಲಿಲ್ಲ ಎಂದು ಇಲಿಯಾಸ್ ಪೋಷಕರು ತಿಳಿಸಿದ್ಜಾರೆ. 
 
ಇಲಿಯಾಸ್ ವಿವಾಹ ಕಾರ್ಯಕ್ರಮಗಳಿಗೆ ಯಾವುದೇ ರೀತಿಯ ಅಡ್ಡಿಪಡಿಸದಂತೆ ಹೀಮಾಳಿಗೆ ಮನವಿ ಮಾಡಿದ್ದೆ. ವಿವಾಹದ ದಿನದಂದು ಆಕೆ ಯಾವುದೇ ಕರೆ ಮಾಡುವುದಾಗಲಿ ಅಥವಾ ಅಡ್ಡಿಯಾಗುವುದಾಗಲಿ ಮಾಡಲಿಲ್ಲ. ಆದರೆ, ವಿವಾಹದ ಮಾರನೇ ದಿನವೇ ಇಲಿಯಾಸ್ ಮೇಲೆ ಆಸಿಡ್ ಎರಚಿ ಸೇಡು ತೀರಿಸಿಕೊಂಡು ನವವಧುವನ್ನು ವಿಧುವೆಯಾಗಿಸಿದ್ದಾಳೆ ಎಂದು ಇಲಿಯಾಸ್ ಸಹೋದರ ಮೆಕ್ಯಾನಿಕ್ ಅಲ್ಲಾಭಕ್ಷ್ ತಿಳಿಸಿದ್ದಾನೆ.    
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಮೇಲೆ ಉಗ್ರರ ಕೆಂಗಣ್ಣು: ದೇಶದೊಳಗೆ 21 ಉಗ್ರರ ಪ್ರವೇಶ