ವಿವಾಹ ಪ್ರಸ್ತಾಪ ತಿರಸ್ಕರಿಸಿದ ಯುವತಿಯನ್ನು ಸಜೀವವಾಗಿ ದಹಿಸಿದ ಯುವಕ

Webdunia
ಮಂಗಳವಾರ, 14 ನವೆಂಬರ್ 2017 (13:00 IST)
ವಿವಾಹ ಪ್ರಸ್ತಾಪವನ್ನು ತಿರಸ್ಕರಿಸಿದ 22 ವರ್ಷದ ಯುವತಿಯನ್ನು ಜೀವಂತವಾಗಿ ದಹಿಸಿದ ಆರೋಪಿ ಯುವಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯುವತಿಯನ್ನು ಉಳಿಸಲು ಹೋದ ತಾಯಿ ಮತ್ತು ಸಹೋದರಿಗೆ ಗಂಭೀರವಾದ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ.
ಓಎಂಆರ್ ರಸ್ತೆಯಲ್ಲಿರುವ ಐಟಿ ಕಂಪೆನಿಯಲ್ಲಿರುವ ಐಟಿ ಕಂಪೆನಿಯಲ್ಲಿ ಯುವತಿ ಸಿಂಧುಜಾ ಉದ್ಯೋಗಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
  
ಸುಟ್ಟಗಾಯಗಳಿಂದ ಗಂಭೀರವಾಗಿ ಗಾಯಗೊಂಡ ಸಿಂಧುಜಾಳನ್ನು ಕಿಲುಪಾಕ್ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಸಿಂಧುಜಾ ತಾಯಿಗೆ ಶೇ.50 ರಷ್ಟು ಸುಟ್ಟಗಾಯಗಳಾಗಿದ್ದು ಸಹೋದರಿ ನಿವೇದಿಕಾಗೆ ಶೇ.20 ರಷ್ಟು ಗಾಯಗಳಾಗಿವೆ. ಸಿಂಧುಜಾ ತಂದೆ ಶನ್ಮುಗಮ್ ದುಬೈಯಲ್ಲಿ ಉದ್ಯೋಗಿಯಾಗಿದ್ದಾರೆ.
 
ಕಾಲೇಜು ಓದುವುದನ್ನು ಅರ್ಧಕ್ಕೆ ನಿಲ್ಲಿಸಿದ್ದ ಆರೋಪಿ ಆಕಾಶ್, ಸಿಂಧುಜಾ ನೆರೆಮನೆಯಲ್ಲಿ ವಾಸವಾಗಿದ್ದ. ಪ್ರತಿನಿತ್ಯ ಅವರ ಮನೆಗೆ ತೆರಳಿ ಹರಟೆ ಹೊಡೆಯುತ್ತಿದ್ದ. ಕೆಲ ತಿಂಗಳುಗಳ ಹಿಂದೆ ಆಕಾಶ್ ಸಿಂಧುಜಾಳ ಮುಂದೆ ವಿವಾಹ ಪ್ರಸ್ತಾಪ ಇಟ್ಟಿದ್ದ. ಆದರೆ. ಆಕೆ ಆತನ ಪ್ರಸ್ತಾಪ ತಿರಸ್ಕರಿಸಿದ್ದಳು ಎನ್ನಲಾಗಿದೆ.
 
ಯುವತಿ ಸಿಂಧುಜಾ ಪೋಷಕರು ವರನಿಗಾಗಿ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಜಾಹೀರಾತು ಹಾಕಿದ್ದರು. ಇದರಿಂದ ಆಕ್ರೋಶಗೊಂಡ ಆಕಾಶ್, ಸಿಂಧುಜಾ ಪೋಷಕರಿಗೆ ಬೆದರಿಕೆ ಹಾಕಿದ್ದ.
 
ನಿನ್ನೆ ರಾತ್ರಿ ಸಿಂಧುಜಾ ಮನೆಗೆ ಬಂದ ಆಕಾಶ್ ಜಗಳ ಆರಂಭಿಸಿದ. ಕೋಪದ ಭರದಲ್ಲಿ ಸಿಂಧುಜಾ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ. ಸಿಂಧುಜಾ ಕೂಗಿಗೆ ಓಡೋಡಿ ಬಂದ ಸಿಂಧುಜಾ ತಾಯಿ ಮತ್ತು ಸಹೋದರಿ ಸುಟ್ಟಗಾಯಗಳಿಂದ ಉಳಿಸಲು ಯತ್ನಿಸಿದರು. ಮನೆಯವರ ಕೂಗಾಟ ಕೇಳಿ ನೆರೆಹೊರೆಯವರು ಸಹಾಯಕ್ಕಾಗಿ ಧಾವಿಸಿದರು.  
 
ಈ ಸಂದರ್ಭದಲ್ಲಿ ಪರಾರಿಯಾಗಲು ಯತ್ನಿಸಿದ ಆಕಾಶ್‌ನನ್ನು ಹಿಡಿದ ಸ್ಥಳೀಯರು ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ. ಮೂವರನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಸಿಂಧುಜಾ ಬದುಕುಳಿಯಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಜೆಐ ಮೇಲೆ ಶೂ ಎಸೆದ ಪ್ರಕರಣ: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ

ಇನ್ಮುಂದೆ 2ವರ್ಷದೊಳಗಿನ ಮಕ್ಕಳಿಗೆ ಪ್ರಿಸ್ಕ್ರಿಪ್ಷನ್ ಇಲ್ಲದೆ ಸಿರಪ್‌ ಇಲ್ಲ

ಸಿಎಂ ಸಿದ್ದರಾಮಯ್ಯರಿಗೆ ಶೀಘ್ರದಲ್ಲೇ ಪರಿಸರ ಸ್ನೇಹಿ ಕಾರು: ನರೇಂದ್ರ ಸ್ವಾಮಿ

ಬಿಹಾರ ಚುನಾವಣಾ ಮಹಾಕದನಕ್ಕೆ ಮುಹೂರ್ತ ಫಿಕ್ಸ್: ಎರಡು ಹಂತದಲ್ಲಿ ಮತದಾನ

ದೇಶದ ಪ್ರಮುಖ ಪ್ರಕರಣಗಳಲ್ಲಿ 2ನೇ ಸ್ಥಾನ ಪಡೆದ ಅಪರಾಧ ಪ್ರಕರಣ ಯಾವುದು ಗೊತ್ತಾ

ಮುಂದಿನ ಸುದ್ದಿ
Show comments