Select Your Language

Notifications

webdunia
webdunia
webdunia
webdunia

ರಸ್ತೆಯಲ್ಲಿ ಅಟ್ಟಾಡಿಸಿ ಕೊಂದರು

ರಸ್ತೆಯಲ್ಲಿ ಅಟ್ಟಾಡಿಸಿ ಕೊಂದರು
ಪುಣೆ , ಭಾನುವಾರ, 25 ಡಿಸೆಂಬರ್ 2016 (17:18 IST)
23 ವರ್ಷದ ಯುವತಿಯನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಮಹಾರಾಷ್ಟ್ರದ ಪುಣೆಯ ಹೊರವಲಯದಲ್ಲಿ ಶನಿವಾರ ನಡೆದಿದೆ. 

ಹತ್ಯೆಯಾದ ಯುವತಿ ಅಂತರಾ ದಾಸ್ ಸಾಫ್ಟವೇರ್ ಎಂಜಿನಿಯರ್ ಆಗಿದ್ದು ತತ್ವಾಡೆ ಪ್ರದೇಶದ ಕ್ಯಾಪ್‌ಜಿಮಿನಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಆಫೀಸಿನಿಂದ ಕೂಗಳತೆ ದೂರದಲ್ಲೇ ಹತ್ಯೆಯಾಗಿದ್ದು ಆಕೆ ಮೂಲತಃ ಪಶ್ಚಿಮ ಬಂಗಾಳದವಳು ಎಂದು ತಿಳಿದು ಬಂದಿದೆ. 
 
ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಸಮಯದಲ್ಲಿ ಈ ಹೇಯ ಘಟನೆ ನಡೆದಿದ್ದು, ಹರಿತವಾದ ಆಯುಧದಿಂದ ಆಕೆಗೆ ಅನೇಕ ಬಾರಿ ಇರಿಯಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
 
ರಕ್ತದ ಮಡುವಿನಲ್ಲಿ ಬಿದ್ದಿದ್ದ ಐಕೆಯನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು.ಆದರೆ ವೈದ್ಯರು ಆಕೆ ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ. 
 
ಈ ದುಷ್ಕೃತ್ಯಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ. ಆಕೆಯ ಮೈಮೇಲಿದ್ದ ಚಿನ್ನಾಭರಣವನ್ನು ದೋಚಿಲ್ಲವಾದ್ದರಿಂದ ಕೊಲೆಯ ಹಿಂದಿನ ಉದ್ದೇಶ ದರೋಡೆಯಾಗಿರುವುದನ್ನು ಪೊಲೀಸರು ಅಲ್ಲಗಳೆದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಕಿಯರ ಮೇಲೆ 6 ತಿಂಗಳುಗಳಿಂದ ಅತ್ಯಾಚಾರವೆಸಗಿದ ಆರೋಪಿ ಅರೆಸ್ಟ್