ಯುಕೆಯಲ್ಲಿರುವ 36 ವರ್ಷದ ಮಹಿಳೆ ತಾನು ಭಾರತದಲ್ಲಿದ್ದಾಗ ಸ್ವತಃ ಸೋದರಮಾವ ತನ್ನ ಮೇಲೆ ರೇಪ್ ಮಾಡಿದ್ದಾರೆಂದು ಕಳಿಸಿದ ಈಮೇಲ್‌ನಿಂದಾಗಿ ಅವರ ಸೋದರಮಾವ ಈಗ ಜೈಲು ಪಾಲಾಗಿದ್ದಾರೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರಪ್ರೀತ್ ಕೌರ್ ರಾಣಿ ಭಾಗ್ ಪ್ರದೇಶದಲ್ಲಿರುವ ಸುಖವಂತ್ ಸಿಂಗ್ ಸಿದುವಿಗೆ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದ್ದಾರೆಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಪೀಡಿತ ಮಹಿಳೆ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಅವರಿಗೆ ಈಮೇಲ್ ಮಾಡಿ ಅನೇಕ ವರ್ಷಗಳ ಕಾಲ ಮನೆಯಲ್ಲಿ ತಮ್ಮ ಸೋದರಮಾವ ರೇಪ್ ಮಾಡಿದ್ದಾರೆಂದು ಬರೆದಿದ್ದರು. 1980ರಲ್ಲಿ ಜನಿಸಿದ ಪೀಡಿತ ಬಾಲಕಿಯ ಅಧ್ಯಯನದ ಸಲುವಾಗಿ ಅವಳನ್ನು ಸೋದರಮಾವನ ಮನೆಯಲ್ಲಿ ಅವಳ ತಾಯಿ ಬಿಟ್ಟಿದ್ದರು.
ಆದರೆ ಬಾಲಕಿಗೆ 9 ವರ್ಷ ಆದಾಗಿನಿಂದ ಸೋದರ ಮಾವ ಪುನಾವರ್ತಿತ ರೇಪ್ ಮಾಡಿದ್ದು, ಹೆದರಿಕೆಯಿಂದ ಬಾಲಕಿ ಯಾರ ಬಳಿಯೂ ಬಾಯಿ ಬಿಟ್ಟಿರಲಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು. ಆದರೆ ಎಂಬಿಬಿಎಸ್ ವಿದ್ಯಾಭ್ಯಾಸದ ಬಳಿಕ ಯುಕೆಗೆ ತೆರಳಿದ ಯುವತಿ ಪಂಜಾಬ್ ಪೊಲೀಸರಿಗೆ ಈ ಮೇಲ್ ಮಾಡಿ ವಿಷಯ ತಿಳಿಸಿದ್ದರು. ತರುವಾಯ 2014ರಲ್ಲಿ ಸೋದರಮಾವನ ವಿರುದ್ಧ ರೇಪ್ ಕೇಸ್ ದಾಖಲಿಸಲಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ.