Publish Date: Fri, 11 Feb 2022 (12:55 IST)
Updated Date: Fri, 11 Feb 2022 (12:57 IST)
ನವದೆಹಲಿ : ಅಮೆರಿಕದ ನ್ಯೂಜೆರ್ಸಿಯಿಂದ ಲಂಡನ್‌ಗೆ ತೆರಳುತ್ತಿದ್ದ ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಅತ್ಯಾಚಾರ ಎಸಗಲಾಗಿದೆ.
ಪ್ರಕರಣದ ಆರೋಪಿಯನ್ನು ಬ್ರಿಟನ್‌ನಲ್ಲಿ ಬಂಧಿಸಲಾಗಿದ್ದು, ನಂತರ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ.
ದಿ ಸನ್ ವರದಿಯ ಪ್ರಕಾರ, ಘಟನೆಯ ಸಮಯದಲ್ಲಿ ಇತರ ಪ್ರಯಾಣಿಕರು ಮಲಗಿದ್ದರು ಎಂದು ಹೇಳಲಾಗಿದೆ. ಈ ಘಟನೆ ಯುನೈಟೆಡ್ ಏರ್‌ಲೈನ್ಸ್ ವಿಮಾನದಲ್ಲಿ ಕಳೆದ ಸೋಮವಾರ ನಡೆದಿದೆ ಎಂದು ಹೇಳಲಾಗಿದೆ.
ಘಟನೆಯ ನಂತರ ಸಂತ್ರಸ್ತ ಮಹಿಳೆ ಏರ್‌ಲೈನ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ನಂತರ ವಿಮಾನಯಾನ ಸಿಬ್ಬಂದಿ ಇಂಗ್ಲೆಂಡ್ ನ ಪೊಲೀಸರಿಗೆ ಮಾಹಿತಿ ನೀಡಿದರು. ನ್ಯೂಜೆರ್ಸಿಯಿಂದ ಲಂಡನ್‌ಗೆ ನೇರ ವಿಮಾನಯಾನ ಅಂದಾಜು 7 ಗಂಟೆಯದ್ದಾಗಿದೆ.
ವಿಮಾನವು ಇಂಗ್ಲೆಂಡ್ ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ, ಆಗಮಿಸಿದ ಪೊಲೀಸ್ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ಸಂತ್ರಸ್ಥೆಯನ್ನು ರೇಪ್ ಕೌನ್ಸೆಲಿಂಗ್ ವಿಭಾಗಕ್ಕೆ ಕರೆದೊಯ್ಯಲಾಗಿದೆ.
ಅಧಿಕಾರಿಗಳು ವಿಮಾನದ ವಿಧಿವಿಜ್ಞಾನ ಪರೀಕ್ಷೆಯನ್ನೂ ನಡೆಸಿದ್ದು, ಸಂತ್ರಸ್ಥ ಮಹಿಳೆ ಹಾಗೂ ಅರೋಪಿ ಇಬ್ಬರ ವಯಸ್ಸೂ 40 ಎಂದು ಹೇಳಲಾಗಿದೆ.