ಸಾಮೂಹಿಕ ಅತ್ಯಾಚಾರ ಪೀಡಿತೆ ಮಹಿಳೆಯನ್ನು ವಿಚಾರಣೆ ನಡೆಸುವಾಗ ಪೊಲೀಸರು ಅಸಂವೇದಾಶೀಲರಾಗಿ ವರ್ತಿಸಿದ್ದಲ್ಲದೆಅಸಭ್ಯ ಪ್ರಶ್ನೆ ಕೇಳಿ ಆಕೆಯ ಮೇಲೆ ಮಾನಸಿಕ ಅತ್ಯಾಚಾರವೆಸಗಿದ ಖಂಡನೀಯ ಘಟನೆ ಕೇರಳದ ತ್ರಿಶೂರ್‌ನಲ್ಲಿ ನಡೆದಿದ್ದು, ಎರಡು ವರ್ಷದ ಬಳಿಕ ಬೆಳಕಿಗೆ ಬಂದಿದೆ.
ನಿನ್ನ ಗಂಡನಿಗೆ ಅಪಘಾತವಾಗಿದೆ ಎಂದು ಸುಳ್ಳು ಹೇಳಿ ಮಹಿಳೆಯನ್ನು ಕರೆದೊಯ್ದ ಆಕೆಯ ಪತಿಯ ಸ್ನೇಹಿತರು ದಾರಿಯಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದರು. ಆಕೆ ದೂರು ನೀಡಲು ಪೊಲೀಸ್ ಠಾಣೆಗೆ ಹೋದಾಗ ಪೊಲೀಸರು ಆಕೆಯ ಬಳಿ ಅತ್ಯಾಚಾರ ಮಾಡಿದವರಲ್ಲಿ ಯಾರು ನಿನಗೆ ಹೆಚ್ಚು ತೃಪ್ತಿ ಕೊಟ್ಟರು ಎಂದು ಕೇಳಿದ್ದಾರೆ.
ಅಷ್ಟೇ ಅಲ್ಲದೇ ಆರೋಪಿಗಳ ಜತೆ ಸೇರಿ ಪ್ರಕರಣವನ್ನು ಹಿಂತೆದುಕೊಳ್ಳುವಂತೆ ಪೀಡಿತೆಯ ಮೇಲೆ ಪೊಲೀಸರು ಜೀವಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ.
ಪ್ರಖ್ಯಾತ ಮಲಯಾಳಂ ಡಬ್ಬಿಂಗ್ ಕಲಾವಿದೆ ಭಾಗ್ಯಲಕ್ಷ್ಮಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಮಹಿಳೆಗಾದ ಅನ್ಯಾಯದ ಕುರಿತು ಫೇಸ್‌ಬುಕ್‌ನಲ್ಲಿ ಬರೆದುಕೊಂಡ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಈ ಪೋಸ್ಟ್‌ನಲ್ಲಿ ಭಾಗ್ಯಲಕ್ಷ್ಮಿ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಳಿ ಒತ್ತಾಯಿಸಿದ್ದಾರೆ. ಈ ಪೋಸ್ಟ್ ಈಗ ವೈರಲ್ ಆಗಿ ಹರಿದಾಡುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ