Webdunia - Bharat's app for daily news and videos

Install App

ಘೋರಾತಿಘೋರ: 12 ವಿದ್ಯಾರ್ಥಿನಿಯರ ಮೇಲೆ ಶಾಲೆಯ 10 ಕ್ಕೂ ಹೆಚ್ಚು ಶಿಕ್ಷಕರಿಂದ ಗ್ಯಾಂಗ್ ರೇಪ್

Webdunia
ಶುಕ್ರವಾರ, 4 ನವೆಂಬರ್ 2016 (11:41 IST)
ಮಹಾರಾಷ್ಟ್ರದ ಆಶ್ರಮ ಶಾಲೆಯೊಂದರಲ್ಲಿ ಸಂಪೂರ್ಣ ಶಿಕ್ಷಕ ಸಮುದಾಯವೇ ತಲೆತಗ್ಗಿಸುವಂತಹ ಮಹಾಘೋರ ಕೃತ್ಯ ನಡೆದಿದೆ.  12 ಬುಡಕಟ್ಟು ಬಾಲಕಿಯರ ಮೇಲೆ 10 ಜನ ಶಿಕ್ಷಕರೂ ಸೇರಿದಂತೆ ಶಾಲೆಯ 11 ಕ್ಕೂ ಹೆಚ್ಚು ಸಿಬ್ಬಂದಿ ಸಾಮೂಹಿಕ ಅತ್ಯಾಚಾರವೆಸಗಿದ ಹೇಯ, ಪೈಶಾಚಿಕ, ಖಂಡನೀಯ ಘಟನೆ ನಡೆದಿದ್ದು, ಸಂಪೂರ್ಣ ದೇಶವೇ ಬೆಚ್ಚಿ ಬಿದ್ದಿದೆ. 

 
ಮುಂಬೈನಿಂದ 450ಕೀಲೋಮೀಟರ್ ದೂರದಲ್ಲಿ, ಬುಲ್ಡಾನಾ ಜಿಲ್ಲೆಯ ಹಿವರ್ಖೇಡಾದಲ್ಲಿರುವ ನಿನಾಧಿ ಆಶ್ರಮ ಶಾಲೆಯಲ್ಲಿ ಈ ಕೃತ್ಯ ನಡೆದಿದೆ.
 
ಆರೋಪಿಗಳಲ್ಲಿ ಶಾಲೆಯ ಮುಖ್ಯ ಶಿಕ್ಷಕ ಕೂಡ ಸೇರಿದ್ದು ಅತ್ಯಾಚಾರಕ್ಕೊಳಗಾದ ಬಾಲಕಿಯರು 12ರಿಂದ 14ರ ವಯಸ್ಸಿನವರೊಳಗಿದ್ದಾರೆ. ಶಾಲಾ ಸಿಬ್ಬಂದಿಯ ಈ ಕೀಚಕ ಕೃತ್ಯದಿಂದ ಕೆಲ ಬಾಲಕಿಯರು ಗರ್ಭಿಣಿಯರಾಗಿದ್ದಾರೆಂದು ತಿಳಿದು ಬಂದಿದೆ.
 
ಪೀಡಿತ ವಿದ್ಯಾರ್ಥಿಗಳು ದೀಪಾವಳಿ ರಜೆಗೆಂದು ಮನೆಗೆ ಬಂದಾಗ ಅವರ ಮೇಲೆ ನಡೆದಿರುವ ಈ ಘೋರ ಕೃತ್ಯ ಬೆಳಕಿಗೆ ಬಂದಿದೆ. 
 
ಮಹಾರಾಷ್ಟ್ರ ರಾಜ್ಯವನ್ನು ಬೆಚ್ಚಿಬೀಳಿಸಿದ ಈ ಪ್ರಕರಣದ ತನಿಖೆ ನಡೆಸಲು ಹಿರಿಯ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿತ್ತು. 11 ಆರೋಪಿಗಳನ್ನು ನಿನ್ನೆ ತಡರಾತ್ರಿ ಬಂಧಿಸಲಾಗಿದೆ. ಆರೋಪಿಗಳ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಶಾಲಿನಿ ರಜನೀಶ್ ಯಾರು ಅವರು ಎಷ್ಟು ಪವರ್ ಫುಲ್ ಗೊತ್ತಾ

ಹನಿಮೂನ್ ಮರ್ಡರ್ ಕೇಸ್ ಗೆ ಬಿಗ್ ಟ್ವಿಸ್ಟ್: ಸೋನಂ ಎರಡನೇ ಮದುವೆ

Arecanut price: ಅಡಿಕೆ, ಕೊಬ್ಬರಿ ಬೆಲೆ ಇಳಿಕೆ, ಕಾಳುಮೆಣಸು ಏರಿಕೆ

ಮಹಿಳೆಯರ ಬಗ್ಗೆ ಮಾತನಾಡೋದು ರವಿಕುಮಾರ್ ಗೆ ಚಟ: ಪ್ರಿಯಾಂಕ್ ಖರ್ಗೆ

Gold Price: ಗುಡ್ ನ್ಯೂಸ್, ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ

ಮುಂದಿನ ಸುದ್ದಿ
Show comments