ಮುಂಬೈ: ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಮಹಿಳೆಯ ಶವವು ಪುಣೆಯ ದೇಸಾಯಿ ಗ್ರಾಮದ ಬಳಿ ಸೇತುವೆ ಕೆಳಗೆ ಸಿಕ್ಕ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿದೆ. ಈ ಸಂಬಂಧ ಆಕೆಯ ಸಂಗಾತಿ ಪೊಲೀಸರ ಅತಿಥಿಯಾಗಿದ್ದಾನೆ.
22 ವರ್ಷದ ಪ್ರಿಯಾಂಕಾ ವಿಶ್ವಕರ್ಮ22 ಕೊಲೆಯಾದ ಮಹಿಳೆ. ಆಕೆಯ ಶವ ಸೋಮವಾರ ಸೇತುವೆ ಕೆಳಗೆ ಪತ್ತೆಯಾಗಿತ್ತು. ಮೃತಳ ಮಣಿಕಟ್ಟಿನ ಮೇಲೆ ಪಿ. ವಿ. ಎಸ್ ಎಂದು ಹೆಚ್ಚೆ ಹಾಕಲಾಗಿದೆ.
ಪ್ರಿಯಾಂಕ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಸ್ಥಳೀಯ ಸಿಸಿಟಿವಿ ನೆರವಿನಿಂದ ಆರೋಪಿ ವಿನೋದ್ ಶ್ರೀನಿವಾಸ್ ವಿಶ್ವಕರ್ಮನನ್ನು ಬಂಧಿಸಿರುವ ಪೊಲೀಸರು, ವಿಚಾರಣೆಗೆ ಒಳಪಡಿಸಿದ್ದಾರೆ.
ಕಳೆದ ಐದು ವರ್ಷಗಳಿಂದ ವಿನೋದ್ ಶ್ರೀನಿವಾಸ್ ಜೊತೆ ಪ್ರಿಯಾಂಕಾ ಸಹ ಜೀವನ ನಡೆಸುತ್ತಿದ್ದರು. ನವೆಂಬರ್ 21ರ ನಡುವೆ ಇಬ್ಬರ ನಡುವೆ ಜಗಳವಾಗಿದ್ದು, ಅದು ಕೊಲೆಯಲ್ಲಿ ಅಂತ್ಯವಾಗಿದೆ.
ಕೊಲೆಯಾದ ದಿನ ಶವವನ್ನು ಮನೆಯಲ್ಲಿ ಇಟ್ಟುಕೊಂಡಿದ್ದ ಆರೋಪಿ, ಅದು ಕೊಳೆಯಲು ಪ್ರಾರಂಭಿಸಿ ದುರ್ವಾಸನೆ ಹರಡುತ್ತಿದ್ದಂತೆ, ಶವವನ್ನು ಸೂಟ್‌ಕೇಸ್‌ಗೆ ತುಂಬಿ ಸೇತುವೆಯ ಕೆಳಗೆ ಎಸೆದಿದ್ದಾನೆ.