Publish Date: Sun, 20 Aug 2017 (10:16 IST)
Updated Date: Sun, 20 Aug 2017 (10:19 IST)
ನವದೆಹಲಿ: ಪ್ರಧಾನಿ ಮೋದಿಯವರ ಸ್ವಚ್ಛ ಭಾರತ ಯೋಜನೆಯನ್ನು ಈ ಮಹಿಳೆ ಯಥಾವತ್ತು ಪಾಲಿಸಿದ್ದಾಳೆ. ಹಾಗಾಗಿ ತನ್ನ ಪತಿಗೇ ಸೊಡಾ ಚೀಟಿ ಕೊಟ್ಟಿದ್ದಾಳೆ.
ರಾಜಸ್ಥಾನದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. 24 ವರ್ಷದ ಮಹಿಳೆ ಮನೆಯಲ್ಲಿ ಟಾಯ್ಲೆಟ್ ಕಟ್ಟಿಸಿಲ್ಲವೆಂದು ಪತಿಯಿಂದ ದೂರವಾಗಲು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ಅದನ್ನು ಇದೀಗ ಇಲ್ಲಿನ ಸ್ಥಳೀಯ ಕೌಟುಂಬಿಕ ನ್ಯಾಯಾಲಯ ಎತ್ತಿ ಹಿಡಿದಿದೆ.
ಬಹಿರ್ದೆಸೆಗೆ ಹೋಗಬೇಕೆಂದರೆ ಕತ್ತಲಾಗುವವರೆಗೂ ಕಾಯಬೇಕು. ನಂತರ ಬಯಲಿನಲ್ಲಿ ಬಹಿರ್ದೆಸೆ ಮಾಡಬೇಕು. ಇದು ತನ್ನ ಗೌರವಕ್ಕೆ ಧಕ್ಕೆಯಾಗುವ ವಿಷಯ ಎಂದು ಆಕೆ ಕೋರ್ಟ್ ನಲ್ಲಿ ದೂರಿದ್ದಳು. ಇದೀಗ ನ್ಯಾಯಾಲಯ ಆಕೆಯ ವಾದವನ್ನು ಒಪ್ಪಿ ವಿಚ್ಛೇದನ ನೀಡಿದೆ.