Select Your Language

Notifications

webdunia
webdunia
webdunia
webdunia

ಸಾಮೂಹಿಕ ಅತ್ಯಾಚಾರ, ಆರೋಪಿಗಳಲ್ಲಿ ಬಿಜೆಪಿ ನಾಯಕನ ಪುತ್ರ

ಸಾಮೂಹಿಕ ಅತ್ಯಾಚಾರ, ಆರೋಪಿಗಳಲ್ಲಿ ಬಿಜೆಪಿ ನಾಯಕನ ಪುತ್ರ
ಮಹಾಸಮುಂದ್ , ಸೋಮವಾರ, 17 ಅಕ್ಟೋಬರ್ 2016 (12:53 IST)
ಮೂವರು ಯುವಕರು ಸೇರಿ ಮಹಿಳೆಯೋರ್ವರ ಮೇಲೆ ಚಲಿಸುವ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ ಹೇಯ ಘಟನೆ ಛತ್ತೀಸ್‌ಗಢದಲ್ಲಿ ಕಳೆದ ವಾರ ನಡೆದಿದೆ. ಆರೋಪಿಗಳಲ್ಲಿ ಒಬ್ಬ ಬಿಜೆಪಿ ನಾಯಕನ ಪುತ್ರ ಎಂದು ಹೇಳಲಾಗುತ್ತಿದ್ದು ಆತನೀಗ ತಲೆ ಮರೆಸಿಕೊಂಡಿದ್ದಾನೆ.
ರಾಜಧಾನಿ ರಾಯ್ಪುರದಿಂದ 75 ಕೀಲೋಮೀಟರ್ ದೂರದಲ್ಲಿ ಗುರುವಾರ ಈ ಘಟನೆ ನಡೆದಿದ್ದು ಪೀಡಿತಳು 36 ವರ್ಷದ ಮಹಿಳೆಯಾಗಿದ್ದಾಳೆ. 
 
ಗುರುವಾರ ರಾತ್ರಿ ಮಹಿಳೆಯನ್ನು ಆಕೆಯ ನಿವಾಸದ ಬಳಿಯಂದಲೇ ಅಪಹರಿಸಿದ ಆರೋಪಿಗಳಾದ ದೇವೇಂದ್ರ, ಫರಿದ್ ಅಲಿ ಮತ್ತು ಪ್ರಿನ್ಸ್ ಸಲುಜಾ ಆಕೆಯನ್ನು ಬಲವಂತವಾಗಿ ತಮ್ಮ ಕಾರ್‌ನೊಳಗೆ ಹಾಕಿಕೊಂಡಿದ್ದಾರೆ. ಪೀಡಿತೆಯ ಸಹೋದರಿಯ ಮುಂದೆಯೇ ಈ ಎಲ್ಲ ಘಟನೆಗಳು ನಡೆದಿವೆ. 
 
ಬಳಿಕ ಚಲಿಸುವ ಕಾರಿನಲ್ಲಿಯೇ ಆಕೆಯ ಮೇಲೆ ಅತ್ಯಾಚಾರವೆಸಗಲಾಗಿದ್ದು, ತಮ್ಮ ದುಷ್ಕೃತ್ಯವನ್ನು ಆರೋಪಿಗಳು ಮೊಬೈಲ್‌ನಲ್ಲಿ ಚಿತ್ರಿಸಿಕೊಂಡಿದ್ದಾರೆ. ನಡೆದ ಕೃತ್ಯದ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ವಿಡಿಯೋವನ್ನು ಅಂತರ್ಜಾಲದಲ್ಲಿ ಹರಿಯಬಿಡುವುದಾಗಿ ಅವರು ಬೆದರಿಸಿದ್ದಾರೆ. 
 
ಆದರೆ ಮಹಿಳೆ ಘಟನೆ ನಡೆದ ಮರುದಿನ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಆರೋಪಿಗಳಲ್ಲೊಬ್ಬನಾದ ಪ್ರಿನ್ಸ್ ಅಹುಜಾ ಬಿಜೆಪಿ ನಾಯಕನ ಮಗನಾಗಿದ್ದು ಘಟನೆ ಬಳಿಕ ತಲೆ ಮರೆಸಿಕೊಂಡಿದ್ದಾನೆ. ಮತ್ತಿಬ್ಬರು ಆರೋಪಿಗಳು ಮತ್ತು ಕೃತ್ಯಕ್ಕೆ ಬಳಸಲಾಗಿದ್ದ ಕಾರ್‌ನ್ನು ವಶಪಡಿಸಿಕೊಳ್ಳಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

'ಕೈ'ಗೆ ಗುಡ್‌ ಬೈ ಹೇಳಿದ ವಿ.ಶ್ರೀನಿವಾಸ್ ಪ್ರಸಾದ್!