Publish Date: Tue, 19 Apr 2016 (08:20 IST)
Updated Date: Tue, 19 Apr 2016 (08:24 IST)
ಮಗುವಿಗೆ ಹಾಲು ಕುಡಿಸು ಎಂದು ಪತಿ ಬೈದುದಕ್ಕೆ ಜಗಳಕ್ಕಿಳಿದ ಪತ್ನಿ ಕೋಪದ ಭರದಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಬೈಯಪ್ಪನಹಳ್ಳಿಯ ಕಗ್ಗದಾಸಪುರದಲ್ಲಿ ನಡೆದಿದೆ.
ಮೃತ 32 ವರ್ಷದ ಕವಿತಾ ಮೂಲತಃ ಕಾರವಾರದವಳಾಗಿದ್ದು ಕಳೆದೆರಡು ವರ್ಷಗಳ ಹಿಂದೆ ಅಂತರ್ ಧರ್ಮೀಯ ಮಹಮದ್ ನಯಾಜ್ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದಳು. ಬಳಿಕ ದಂಪತಿಗಳು ಬೆಂಗಳೂರಿನಲ್ಲಿ ನೆಲೆಸಿದ್ದರು. ಇವರಿಗೆ 6 ತಿಂಗಳ ಮಗುವಿದೆ.
ಭಾನುವಾರ ರಾತ್ರಿ ಮಗು ಹಸಿವಿನಿಂದ ಅಳುತ್ತಿದ್ದಾಗ ಪತಿ ನಯಾಜ್ ಅದಕ್ಕೆ ಹಾಲು ಕುಡಿಸೆಂದು ಪತ್ನಿಗೆ ಬೈದಿದ್ದಾನೆ. ಕೋಪದಲ್ಲಿ ಆಕೆಗೆ ಎರಡೇಟು ಬಾರಿಸಿದ್ದಾನೆ.ಇದರಿಂದ ಮನನೊಂದ ಕವಿತಾ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ಬೈಯಪ್ಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.