ಹೈದರಾಬಾದ್: ರಕ್ಷಕರಾಗಬೇಕಾದವರೇ ಭಕ್ಷಕರಾದರೆ ಹೇಗೆ? ತೆಲಂಗಾಣದಲ್ಲಿ ಯುವತಿಯೊಬ್ಬಳ ಮೇಲೆ ಪೊಲೀಸ್ ಸೇರಿದಂತೆ ಕಾಮುಕರು ಗುಂಪು ಅತ್ಯಾಚಾರ ನಡೆಸಿದ್ದಾರೆ.
23 ವರ್ಷದ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾವಿಗೆ ಮುನ್ನ ತನ್ನ ಮೇಲೆ ಓರ್ವ ಪೊಲೀಸ್ ಸೇರಿದಂತೆ ನಾಲ್ವರು ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾಳೆ.
ತನ್ನ ಸ್ನೇಹಿತೆಯ ಮನೆಗೆ ರಾತ್ರಿ ಉಳಿದುಕೊಳ್ಳಲು ಹೋಗಿದ್ದಾಗ ಅತ್ಯಾಚಾರವಾಗಿತ್ತು. ಮನೆಗೆ ಬಂದ ಮೇಲೆ ಯುವತಿ ವಿಷ ಸೇವಿಸಿದ್ದಾಳೆ. ಇದನ್ನು ನೋಡಿದ ಸಹೋದರ ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾನೆ. ಹಾಗಿದ್ದರೂ ಬದುಕಿಸಲಾಗಲಿಲ್ಲ. ಆರೋಪಿಗಳ ಪೈಕಿ ಮೂವರನ್ನು ಬಂಧಿಸಲಾಗಿದ್ದು, ಇನ್ನೋರ್ವನಿಗಾಗಿ ಹುಡುಕಾಟ ನಡೆಸಲಾಗಿದೆ.