Select Your Language

Notifications

webdunia
webdunia
webdunia
webdunia

ಶಿಕ್ಷಿತೆ ಎನ್ನುವ ಮಾತ್ರಕ್ಕೆ ಮಹಿಳೆಯರಿಗೆ ಕೆಲಸ ಮಾಡಲು ಒತ್ತಾಯಿಸುವಂತಿಲ್ಲ

ಶಿಕ್ಷಿತೆ ಎನ್ನುವ ಮಾತ್ರಕ್ಕೆ ಮಹಿಳೆಯರಿಗೆ ಕೆಲಸ ಮಾಡಲು ಒತ್ತಾಯಿಸುವಂತಿಲ್ಲ
ಮುಂಬೈ , ಬುಧವಾರ, 15 ಜೂನ್ 2022 (08:20 IST)
ಮುಂಬೈ: ಶಿಕ್ಷಿತೆ ಎನ್ನುವ ಮಾತ್ರಕ್ಕೆ ಮಹಿಳೆಯರನ್ನು ಉದ್ಯೋಗ ಮಾಡಲು ಬಲವಂತ ಮಾಡುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಆದೇಶಿಸಿದೆ.

ವ್ಯಕ್ತಿಯೊಬ್ಬರು ತನ್ನ ಮಾಜಿ ಪತ್ನಿಗೆ ವಿಚ್ಛೇದನದ ಬಳಿಕ ಜೀವನಾಂಶ ನೀಡಬೇಕೆಂಬ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಪತ್ನಿ ಪದವೀಧರೆಯಾಗಿದ್ದಳು. ಹೀಗಾಗಿ ಆಕೆ ಸ್ವಂತವಾಗಿ ದುಡಿಯಬಹುದು. ಹೀಗಾಗಿ ತಾನು ಜೀವನಾಂಶ ನೀಡಬೇಕೆನ್ನುವುದು ಸರಿಯಲ್ಲ ಎನ್ನುವುದು ಅರ್ಜಿದಾರನ ವಾದವಾಗಿತ್ತು.

ಆದರೆ ಈ ಪ್ರಕರಣದ ಬಗ್ಗೆ ತೀರ್ಪು ನೀಡಿದ ಮಹಿಳಾ ನ್ಯಾಯಾಧೀಶರು, ನಾನೂ ಒಬ್ಬ ಮಹಿಳೆ. ನಾಳೆ ನಿವೃತ್ತಿಯಾಗಿ ಮನೆಯಲ್ಲಿ ಕೂರಬಹುದು. ಆಗಲೂ ನಾನು ದುಡಿದು ತರಬೇಕು ಎಂದು ಯಾರದರೂ ಬಲವಂತ ಮಾಡಲು ಸಾಧ್ಯವೇ? ಮಹಿಳೆ ಉದ್ಯೋಗಕ್ಕೆ ಹೋಗಬೇಕೋ, ಮನೆಯಲ್ಲಿಯೇ ಇರಬೇಕೋ ಎಂದು ತೀರ್ಮಾನಿಸುವ ಸ್ವತಂತ್ರ ಆಕೆಗೆ ಇದೆ ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೈಕ್ ಸಕ್ರಮಕ್ಕೆ ನೀಡಿದ್ದ ಗಡುವು ಅಂತ್ಯ