Webdunia - Bharat's app for daily news and videos

Install App

ನವಜಾತಶಿಶು ಸೇರಿದಂತೆ 9ಮಂದಿಯನ್ನು ಬಲಿ ಪಡೆದ ತೋಳ ಕೊನೆಗೂ ಸೆರೆ

Sampriya
ಗುರುವಾರ, 29 ಆಗಸ್ಟ್ 2024 (18:02 IST)
Photo Courtesy X
ಉತ್ತರಪ್ರದೇಶ: ಬಹ್ರೈಚ್‌ನ ಮಹ್ಸಿ ಪ್ರದೇಶದಲ್ಲಿ ಎಂಟು ಮಕ್ಕಳು ಮತ್ತು ವೃದ್ಧ ಮಹಿಳೆ ಸೇರಿದಂತೆ ಒಂಬತ್ತು ಜನರನ್ನು ಕೊಂದ ತೋಳವನ್ನು ಗುರುವಾರ  ಅರಣ್ಯ ಇಲಾಖೆ ಹಿಡಿದಿದೆ.

ಕೆಲ ದಿನಗಳ ಹಿಂದೆ ತಾಯಿಯ ಮಡಿಲಿಂದ ಶಿಶುವನ್ನು ತೋಳ ಕಿತ್ತುಕೊಂಡು ಹೋಗಿ ಕೊಂದು ಹಾಕಿತ್ತು. ಈ ಘಟನೆ ಬಳಿಕ ಈ ಪ್ರದೇಶದ ಜನರು ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ.  ಇತ್ತೀಚೆಗೆ ಜಿಲ್ಲೆಯಲ್ಲಿ ಇದೇ ರೀತಿ 10ಕ್ಕೂ ಅಧಿಕ ಮಂದಿ ಮೇಲೆ ಈ ತೋಳ ದಾಳಿ ನಡೆಸಿದೆ. ಅದಲ್ಲದೆ ತೋಳ ದಾಳಿಗೆ ಎಂಟು ಮಕ್ಕಳು ಸೇರಿ ಒಂಭತ್ತು ಮಂದಿ ಸಾವನ್ನಪ್ಪಿದ್ದರು.  ಈ ಘಟನೆಯಿಂದ ಸುತ್ತಾ ಮುತ್ತಲಿನ ಜನ ಬೆಚ್ಚಿಬಿದ್ದಿದ್ದು, ತೋಳ ಸೆರೆಹಿಡಿಯಬೇಕೆಂದು ಆಗ್ರಹಿಸಿದ್ದಾರೆ.

ಐದು ಜಿಲ್ಲೆಗಳ ಅರಣ್ಯ ಇಲಾಖೆ ತಂಡಗಳು ತೋಳ ಹಿಡಿಯುವ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು. ಒಟ್ಟು 200 ಸಿಬ್ಬಂದಿಯನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿದೆ. ಕೊನೆಗೆ ಇಲಾಖೆ ಹಾಕಿದ್ದ ಬೋನಿನಲ್ಲಿ ತೋಳ ಸಿಕ್ಕಿಬಿದ್ದಿದೆ.

ವಶಪಡಿಸಿಕೊಂಡ ತೋಳವು ಗಂಡಾಗಿದ್ದು, ಐದು ವರ್ಷದ್ದು ಎನ್ನಲಾಗಿದೆ.  ತೋಳ ಸೆರೆ ಸಿಕ್ಕ ಸುದ್ದಿ ತಿಳಿದ ಗ್ರಾಮಸ್ಥರು ಹಾಗೂ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments