Publish Date: Thu, 29 Aug 2024 (15:27 IST)
Updated Date: Thu, 29 Aug 2024 (15:31 IST)
ಬೆಂಗಳೂರು: ಪಾಸ್ ಪೋರ್ಟ್ ಗಾಗಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದೀರಾ ಹಾಗಿದ್ದರೆ ಕೇಂದ್ರ ಸರ್ಕಾರದ ಈ ಒಂದು ಸೂಚನೆಯನ್ನು ಗಮನಿಸಿ. ಇನ್ನು ಐದು ದಿನಗಳ ಕಾಲ ನಿಮ್ಮ ಕೆಲಸಗಳು ನಡೆಯಲ್ಲ. ಇದಕ್ಕೂ ಕಾರಣವಿದೆ.
ಆನ್ ಲೈನ್ ಮೂಲಕ ಪಾಸ್ ಪೋರ್ಟ್ ಸೇವಾ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸುವವರಿಗೆ ಇದೀಗ ಅಡಚಣೆಯುಂದು ಉಂಟಾಗಿದೆ. ಮುಂದಿನ ಐದು ದಿನಗಳ ಕಾಲ ಹೊಸದಾಗಿ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸುವವರು ಅಥವಾ ನವೀಕರಿಸಲು ಬಯಸುವವರಿಗೆ ತಮ್ಮ ಕೆಲಸ ಮಾಡಲು ಸಾಧ್ಯವಾಗದು.
ಇಂದು ಬೆಳಿಗ್ಗೆ 8 ಗಂಟೆಯಿಂದ ಸೆಪ್ಟೆಂಬರ್ 2 ರ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ನಿರ್ವಹಣಾ ಕಾರ್ಯಗಳ ನಿಮಿತ್ತ ಪಾಸ್ ಪೋರ್ಟ್ ಸೇವಾ ಪೋರ್ಟಲ್ ಬಂದ್ ಆಗಲಿದೆ. ಈ ಸಂದರ್ಭದಲ್ಲಿ ನಿಮಗೆ ಪಾಸ್ ಪೋರ್ಟ್ ಸಂಬಂಧಿತ ಅರ್ಜಿ ಸಲ್ಲಿಸಲು ಸಾಧ್ಯವಾಗದು.
ಈಗಾಗಲೇ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಿರುವವರ ಕೆಲಸಗಳು ಅಪಾಯಿಂಟ್ ಮೆಂಟ್ ರೀತಿಯಲ್ಲಿ ದುರಸ್ಥಿ ಬಳಿಕ ಕಾರ್ಯನಿರ್ವಹಣೆಯಾಗಲಿದೆ. ಇದಕ್ಕಾಗಿ ಅರ್ಜಿದಾರರಿಗೆ ಮೊದಲೇ ಮಾಹಿತಿ ನೀಡಲಾಗುತ್ತದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಪಾಯಿಂಟ್ ಮೆಂಟ್ ಮರು ನಿಗದಿ ಮಾಡಲಾಗುವುದು ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.