ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಭಾರತೀಯ ಮೂಲದ ಮಹಿಳೆ ಜುಡಿತ್ ಡಿಸೋಜಾ ಅವರ ಅಪಹರಣವಾಗಿರುವ ಬಗ್ಗೆ ಟ್ವೀಟ್ ಮಾಡಿದ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಜುಡಿತ್‌ರನ್ನು ಬಿಡುಗಡೆಗೊಳಿಸಲು ಸರ್ವಪ್ರಯತ್ನ ಮಾಡಲಾಗುವುದು ಎಂದು ಹೇಳಿದ್ದಾರೆ.
ಜುಡಿತ್ ತಾಯಿ ಜೆರೋಮ್ ಡಿಸೋಜಾ ಮತ್ತು ಆಕೆಯ ಸಹೋದರ ವಿದೇಶಾಂಗ ಇಲಾಖೆಗೆ ಮನವಿ ಮಾಡಿದ ನಂತರ ಸ್ವರಾಜ್ ಹೇಳಿಕೆ ಹೊರಬಿದ್ದಿದೆ.
ಜುಡಿತ್ ನಿಮ್ಮ ಸಹೋದರಿ ಮತ್ತು ಭಾರತಾಂಬೆಯ ಪುತ್ರಿಯಾಗಿದ್ದಾಳೆ. ಆಕೆಯ ಬಿಡುಗಡೆಗೆ ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ನಿಮ್ಮ ತಂದೆಯನ್ನು ನೋಡಿಕೊಳ್ಳಿ ಎಂದು ಜುಡಿತ್ ಸಹೋದರನಿಗೆ ಸಂದೇಶ ರವಾನಿಸಿದ್ದಾರೆ.
ಅಫ್ಘಾನಿಸ್ತಾನದ ಕಾಬೂಲ್‌ನ ತೈಮಣಿ ಪ್ರದೇಶದಿಂದ ಗುರುವಾರ ರಾತ್ರಿ ಜುಡಿತ್ ಡಿಸೋಜಾರನ್ನು ಅಪಹರಿಸಲಾಗಿದೆ. ಜುಡಿತ್ ಆಗಾ ಖಾನ್ ಫೌಂಡೇಶನ್ ಪರವಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಅಫ್ಘಾನಿಸ್ತಾನದ ಅಧಿಕಾರಿಗಳು ಜುಡಿತ್‌ರನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ಅಫ್ಘನ್ ಅಧಿಕಾರಿಗಳೊಂದಿಗೆ ಹಾಗೂ ಮಹಿಳೆಯ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ರಾಯಭಾರಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ