Webdunia - Bharat's app for daily news and videos

Install App

ಪತ್ನಿಯ ಮೇಲೆ ಅತ್ಯಾಚಾರ ಮಾಡದಂತೆ ತಡೆದ ಪತಿಯನ್ನು ಹತ್ಯೆಗೈದ ಮಾವೋವಾದಿಗಳು

Webdunia
ಶುಕ್ರವಾರ, 10 ಜೂನ್ 2016 (15:30 IST)
ಕಳೆದ ಒಂದು ತಿಂಗಳಿನಿಂದ ಪತ್ನಿಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸುತ್ತಿದ್ದ ಮಾವೋವಾದಿಗಳನ್ನು ತಡೆಯಲು ಹೋದ ಪತಿಯನ್ನು ಏಕೆ-47 ರೈಫಲ್‌ನಿಂದ ಹತ್ಯೆಗೈಯಲಾಗಿದೆ.
  
ಬಿಹಾರ್‌ನ ಔರಂಗಾಬಾದ್ ಜಿಲ್ಲೆಯ ಮದನ್‌ಪುರ್ ಗ್ರಾಮದ ನಿವಾಸಿಯಾಗಿದ್ದ ಅವಧೇಶ್ ಸಿಂಗ್ ಭೋಕ್ತಾ, ತನ್ನ ಪತ್ನಿಯ ಮೇಲೆ ನಿರಂತರ ಅತ್ಯಾಚಾರವೆಸಗುತ್ತಿದ್ದ ನಿಷೇಧಿತ ಮಾವೋ ಗುಂಪಿನ ಸ್ವಯಂಘೋಷಿತ ಇಬ್ಬರು ಕಮಾಂಡರ್‌ಗಳನ್ನು ತಡೆದಾಗ ಅವರುಸ ಅವಧೇಶ್ ಮೇಲೆ ಏಕೆ-47 ರೈಫಲ್‌ನಿಂದ ಏಳು ಬಾರಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.
 
ಕಳೆದ ಒಂದು ತಿಂಗಳಿನಿಂದ ಮಾವೋವಾದಿ ಕಮಾಂಡರ್‌ಗಳಾದ ಪ್ರಸಾದ್‌ಜಿ ಮತ್ತು ನವಾಜಿ ನನ್ನ ಮೇಲೆ ಅತ್ಯಾಚಾರವೆಸಗುತ್ತಿದ್ದರು. ಇದನ್ನು ಪತಿ ವಿರೋಧಿಸಿದಾಗ ಆತನನ್ನು ಹತ್ಯೆ ಮಾಡಲಾಗಿದೆ ಎಂದು ಅವಧೇಶ್ ಪತ್ನಿ ಪೊಲೀಸರಿಗೆ ತಿಳಿಸಿದ್ದಾಳೆ.
 
ಪತಿಯನ್ನು ಹತ್ಯೆ ಮಾಡಿದ ಬಳಿಕ ಕೆಲ ಸಂದೇಶಗಳಿರುವ ಪತ್ರಗಳನ್ನು ಎಸೆದು ಮಾವೋವಾದಿಗಳು ಅರಣ್ಯದಲ್ಲಿ ಪರಾರಿಯಾಗಿದ್ದಾರೆ, ಪತ್ರದಲ್ಲಿ ಅವಧೇಶ್ ಪೊಲೀಸ್ ಮಾಹಿತಿದಾರನಾಗಿದ್ದರಿಂದ ಹತ್ಯೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.
 
ಮಾವೋವಾದಿಗಳು ಆರೋಪವನ್ನು ತಳ್ಳಿಹಾಕಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಾಬುರಾಮ್, ಮಾವೋಗಳು ಮುಗ್ದ ವ್ಯಕ್ತಿಯನ್ನು ಹತ್ಯೆ ಮಾಡಿದ್ದಾರೆ. ಆತನು ಪೊಲೀಸ್ ಮಾಹಿತಿದಾರನಲ್ಲ ಎಂದು ತಿಳಿಸಿದ್ದಾರೆ.

 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಂಧನ ಭೀತಿಯಲ್ಲಿ ಕೋರ್ಟ್ ಮೊರೆ ಹೋದ ಬೈರತಿ ಬಸವರಾಜ್

ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿ ನೋಡೋಣ: ವಿಜಯೇಂದ್ರ

Video: ಸಂಸದೆ ಕಂಗನಾ ರನೌತ್ ಕಾಲ ಬಳಿ ಕೂತು ವೃದ್ಧರು ಸಮಸ್ಯೆ ಹೇಳಿದರೂ ಕರಗದ ಮನಸ್ಸು

ನಿಮಿಷ ಪ್ರಿಯಗೆ ಈಗ ಒಂದೊಂದು ನಿಮಿಷವೂ ನರಕ: ಮೆಹ್ದಿ ಕುಟುಂಬ ಹೇಳಿದ್ದೇನು

ಟ್ಯಾಬ್ಲೆಟ್ ತೆಗೆದುಕೊಳ್ಳದೇ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಇಲ್ಲಿದೆ ಉಪಾಯ

ಮುಂದಿನ ಸುದ್ದಿ
Show comments