Select Your Language

Notifications

webdunia
webdunia
webdunia
webdunia

ತಲೆ ಕತ್ತರಿಸಿ ಲಾಲ್‌ಚೌಕ್‌ನಲ್ಲಿ ನೇತುಹಾಕ್ತೇವೆ: ಹುರಿಯತ್ ನಾಯಕರಿಗೆ ಹಿಜ್ಬುಲ್ ಉಗ್ರರ ಬೆದರಿಕೆ

ತಲೆ ಕತ್ತರಿಸಿ ಲಾಲ್‌ಚೌಕ್‌ನಲ್ಲಿ ನೇತುಹಾಕ್ತೇವೆ: ಹುರಿಯತ್ ನಾಯಕರಿಗೆ ಹಿಜ್ಬುಲ್ ಉಗ್ರರ ಬೆದರಿಕೆ
ಶ್ರೀನಗರ್ , ಶನಿವಾರ, 13 ಮೇ 2017 (14:44 IST)
ಹುರಿಯತ್ ನಾಯಕರು ಇಸ್ಲಾಂ ವಿರುದ್ಧದ ಹೋರಾಟಕ್ಕೆ ಅಡ್ಡಿಪಡಿಸಿದಲ್ಲಿ ಅವರ ತಲೆಗಳನ್ನು ಕತ್ತರಿಸಿ ಲಾಲ್‌ಚೌಕ್‌ನಲ್ಲಿ ನೇತುಹಾಕಲಾಗುವುದು ಎಂದು ಹಿಜ್ಬುಲ್ ಮುಜಾಹಿದಿನ್ ಉಗ್ರಗಾಮಿ ಸಂಘಟನೆ ಎಚ್ಚರಿಸಿದೆ.
 
ಹಿಜ್ಬುಲ್ ಮುಜಾಹಿದಿನ್ ಉಗ್ರಗಾಮಿ ಸಂಘಟನೆಯ ಮುಖಂಡ ಝಕೀರ್ ಮೂಸಾ ಪ್ರತ್ಯೇಕತಾವಾದಿಗಳಿಗೆ ಎಚ್ಚರಿಕೆ ನೀಡಿದ್ದಾನೆ.
 
ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ವೈರಲ್ ಆದ ಝಕೀರ್ ವಿಡಿಯೋದಲ್ಲಿ ಎಲ್ಲಾ ಹುರಿಯತ್ ನಾಯಕರಿಗೆ ಎಚ್ಚರಿಕೆ ನೀಡುತ್ತಿದ್ದೇವೆ. ಇಸ್ಲಾಮಿಕ್ ಹೋರಾಟದಲ್ಲಿ ಮಧ್ಯಪ್ರವೇಶಿಸುವುದು ಬೇಡ. ಒಂದು ವೇಳೆ ಮಧ್ಯಪ್ರವೇಶಿಸಿದಲ್ಲಿ ಅವರ ತಲೆಗಳನ್ನು ಕತ್ತರಿಸಿ ಲಾಲ್‌ಚೌಕ್‌ನಲ್ಲಿ ನೇತುಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾವೆ.   
 
ಹಿಜ್ಬುಲ್ ಮುಜಾಹಿದಿನ್ ಸಂಘಟನೆ ಕಾಶ್ಮಿರದಲ್ಲಿ ಶರಿಯತ್ ಹೇರುವ ಗುರಿಯನ್ನು ಹೊಂದಿದೆಯೇ ಹೊರತು ಕಾಶ್ಮಿರ ಸಮಸ್ಯೆಯ ಪರಿಹಾರ ಮಾಡಲು ಬಯಸುವುದಿಲ್ಲ. ಅದೊಂದು ರಾಜಕೀಯ ಹೋರಾಟ ಎಂದು ಝಕೀರ್ ತಿಳಿಸಿದ್ದಾನೆ. 
 
ಸೇನಾಧಿಕಾರಿ ಲೆಫ್ಟಿನೆಂಟ್ ಉಮರ್ ಫಯಾಜ್ ಹತ್ಯೆಯಲ್ಲಿ ಭಾಗಿಯಾಗಿರುವ ಎಲ್‌ಇಟಿ, ಹಿಜ್ಬುಲ್ ಮುಜಾಹಿದಿನ್ ಉಗ್ರರ ಫೋಟೋಗಳನ್ನು ಜಮ್ಮು ಕಾಶ್ಮಿರದ ಪೊಲೀಸರು ಬಿಡುಗಡೆಗೊಳಿಸಿದ್ದಾರೆ.  
 
ನಮ್ಮ ಹೋರಾಟ ಇಸ್ಲಾಂ ಮತ್ತು ಶರಿಯತ್ ಪರವಾಗಿದೆ ಎನ್ನುವುದನ್ನು ಹುರಿಯತ್ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಐದು ನಿಮಿಷಗಳ ವಿಡಿಯೋದಲ್ಲಿ ಹಿಜ್ಬುಲ್ ಮುಜಾಹಿದಿನ್ ಉಗ್ರ ಝಕೀರ್ ಮೂಸಾ ಕರೆ ನಿಡಿದ್ದಾನೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಆರೋಪಪಟ್ಟಿ ಡಿಸ್‌ಮಿಸ್ ಮಾಡಿದ್ದೇವೆ: ಸಿಎಂ ಸಿದ್ದರಾಮಯ್ಯ