Webdunia - Bharat's app for daily news and videos

Install App

ಸ್ಮಾರ್ಟ್‌ಫೋನ್ ಲಾಕ್ ಕೋಡ್ ತಿಳಿಸದ್ದಕ್ಕೆ ಪತ್ನಿ ಹತ್ಯೆ

Webdunia
ಗುರುವಾರ, 8 ಸೆಪ್ಟಂಬರ್ 2016 (15:14 IST)
ಸ್ಮಾರ್ಟ್‌ಫೋನ್ ಲಾಕ್ ಕೋಡ್ ಹೇಳಲು ನಿರಾಕರಿಸಿದ್ದಕ್ಕೆ ಪತಿ ಮಹಾಶಯನೊಬ್ಬ ಪತ್ನಿಯ ಕೊಲೆ ಮಾಡಿಸಿದ ಹೇಯ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. 

ಪೂನಂ ವರ್ಮಾ ಕೊಲೆಯಾದ ದುರ್ದೈವಿಯಾಗಿದ್ದು ಆಗಸ್ಟ್ 29 ರಂದು ಘಟನೆ ನಡೆದಿತ್ತು.

ಮೃತಳ ಪತಿ, ಆರೋಪಿ ವಿನೀತ್ ಕುಮಾರ್ ದಿವಾಕರ್ ಸ್ನೇಹಿತರು ಆಗಸ್ಟ್ 29 ರ ರಾತ್ರಿ ಪೂನಂ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದರು. ಮರುದಿನ ಬೆಳಿಗ್ಗೆ ನಾಲ್ಕು ವರ್ಷದ ಮಗು ತಾಯಿ ಎದ್ದೇಳುತ್ತಿಲ್ಲವೆಂದು ನೆರೆಮನೆಯವರಿಗೆ ವಿಷಯ ತಿಳಿಸಿದಾಗ ದುಷ್ಕೃತ್ಯ ಬೆಳಕಿಗೆ ಬಂದಿತ್ತು. 
 
ಈ ಸಮಯದಲ್ಲಿ ವಿನೀತ್ ವ್ಯವಹಾರದ ನೆಪ ಒಡ್ಡಿ ಕಾನ್ಪುರದಲ್ಲಿದ್ದುದು ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ಗೊತ್ತಾಗಿದೆ.
 
ವಿನೀತ್ ಮೊಬೈಲ್ ಕರೆ ಆಧರಿಸಿ ವಿಚಾರಣೆಗೊಳಪಡಿಸಿದಾಗ ಎಲ್ಲ ವಿಚಾರ ಬೆಳಕಿಗೆ ಬಂದಿದೆ. ತನ್ನ ಪತ್ನಿ ಇತ್ತೀಚಿಗೆ ಸದಾ ಫೋನ್‌ನಲ್ಲಿಯೇ ವ್ಯಸ್ತಳಾಗಿರುತ್ತಿದ್ದಳು. ನನ್ನನ್ನು ಮತ್ತು ಮಗಳನ್ನು ನಿರ್ಲಕ್ಷಿಸುತ್ತಿದ್ದಳು. ಯಾರು ಕೂಡ ಫೋನ್ ಬಳಸದಂತೆ ಲಾಕ್ ಕೋಡ್ ಹಾಕಿದ್ದಳು. ಆಕೆಯ ಅನುಮಾನಾಸ್ಪದ ವರ್ತನೆಯಿಂದ ಬೇಸತ್ತು ಕೊಲೆಗೈಯ್ಯಲು ನಿರ್ಧರಿಸಿದೆ. ಸ್ನೇಹಿತರಿಗೆ 80,000 ಹಣ ಕೊಟ್ಟು ಹತ್ಯೆ ಮಾಡಿಸಿ ದರೋಡೆ ನಡೆಸಿ ಕೊಲೆ ಮಾಡಲಾಗಿದೆ ಎಂಬಂತೆ ಬಿಂಬಿಸಿದೆವು ಎಂದಾತ ಬಾಯ್ಬಿಟ್ಟಿದ್ದಾನೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಮಾನಗಳಲ್ಲಿ ಯಾಕೆ ಹೀಗಾಗುತ್ತಿದೆ, ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶವಾಯಿತು ಇಂಡಿಗೋ ವಿಮಾನ

ಯೋಗ ಜಗತ್ತನ್ನು ಒಂದುಗೂಡಿಸುತ್ತದೆ: ಪ್ರಧಾನಿ ನರೇಂದ್ರ ಮೋದಿ

ಸೊಸೆಯನ್ನು ತಾನೇ ಕೊಂದು, ನಾಪತ್ತೆ ನಾಟಕವಾಡಿದ್ದ ಮಾವ ಕೊನೆಗೂ ಅರೆಸ್ಟ್‌

ಇರಾನ್‌ನಿಂದ 290 ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ವಾಪಾಸ್‌, ಮೂರು ಹಂತದಲ್ಲಿ ಕಾರ್ಯಚರಣೆ

ಇಸ್ರೇಲ್‌ನಲ್ಲಿರುವ ಭಾರತೀಯರು ತಾಯ್ನಾಡಿಗೆ ವಾಪಾಸ್ಸಾಗಬೇಕೇ, ಸರ್ಕಾರ ಏನ್ ಹೇಳ್ತಿದೆ

ಮುಂದಿನ ಸುದ್ದಿ
Show comments