Select Your Language

Notifications

webdunia
webdunia
webdunia
webdunia

ಸ್ಟ್ರೆಚರ್ ನೀಡಲಿಲ್ಲವೆಂದು ರೋಗಿ ಪತಿಯನ್ನು ಮೊದಲ ಮಹಡಿಗೆ ಎಳೆದೊಯ್ದಳು

Wife
ಅನಂತಪುರ , ಶುಕ್ರವಾರ, 18 ನವೆಂಬರ್ 2016 (13:51 IST)
ಮೊದಲ ಮಹಡಿಗೆ ಕರೆದೊಯ್ಯಲು ಆಸ್ಪತ್ರೆ ಸಿಬ್ಬಂದಿ ಸ್ಟ್ರೆಚರ್ ನೀಡಲಿಲ್ಲವೆಂದು, ಅಸಹಾಯಕ ಪತ್ನಿ ರೋಗಗ್ರಸ್ತ ಪತಿಯನ್ನು ಅನಿವಾರ್ಯವಾಗಿ ದರದರನೆ ಎಳೆದೊಯ್ದರುವ ಅಮಾನವೀಯ ಮತ್ತು ಖಂಡನೀಯ ಘಟನೆ ಅನಂತಪುರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. 
40 ವರ್ಷದ ಶ್ರೀವಾಣಿ ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಪತಿ ಶ್ರೀನಿವಾಸ್ ಎಂಬುವವರನ್ನು ಆಸ್ಪತ್ರೆಗೆ ಕರೆತಂದಿದ್ದಳು. ನಡೆಯಲು ಸಹ ಅಶಕ್ತನಾಗಿದ್ದ ಪತಿಯನ್ನು ಆಸ್ಪತ್ರೆಯ ಮೊದಲ ಮಹಡಿಗೆ ಕರೆದೊಯ್ಯಲು ಆಕೆ ಸ್ಟ್ರೆಚರ್ ಕೇಳಿದ್ದಾಳೆ. ಸ್ಟ್ರೆಚರ್ ಇತ್ತೋ, ಇರಲಿಲ್ಲವೋ ತಿಳಿಯದು. ಅವರದನ್ನು ಒದಗಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. 
 
ಹೀಗಾಗಿ ಬೇರೆ ದಾರಿಕಾಣದೆ ಆಕೆ ತನ್ನ ಪತಿಯ ಒಂದು ಕೈಯನ್ನು ಹಿಡಿದು ಕೆಳ ಮಹಡಿಯಿಂದ ಮೊದಲ ಮಹಡಿಗೆ ದರದರನೆ ಎಳೆದು ತಂದಿದ್ದಾಳೆ. ಇದನ್ನೆಲ್ಲ ಬೇರೆ ರೋಗಿಗಳು ಮತ್ತು ಆಸ್ಪತ್ರೆ ಸಿಬ್ಬಂದಿ ಮೂಕ ಪ್ರೇಕ್ಷಕರಾಗಿ ನೋಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಜನಾರ್ದನ ರೆಡ್ಡಿ ಪುತ್ರಿಯ ವಿವಾಹಕ್ಕೆ ಹಳೆ ನೋಟು ಬಳಕೆ