Publish Date: Sat, 22 Jul 2017 (09:48 IST)
Updated Date: Sat, 22 Jul 2017 (09:51 IST)
ವೆಲ್ಲೋರ್: ಅಕ್ರಮ ಸಂಬಂಧ ಹೊಂದಿದ್ದ ಪತಿ ತನ್ನ ಶೀಲವನ್ನೇ ಶಂಕಿಸಿದ್ದಕ್ಕೆ ಬೇಸತ್ತ ಮಹಿಳೆಯೊಬ್ಬರು ಆತನ ಮರ್ಮಾಂಗಕ್ಕೇ ಕತ್ತರಿ ಹಾಕಿದ ಘಟನೆ ವೆಲ್ಲೋರ್ ನಲ್ಲಿ ನಡೆದಿದೆ.
ಇದೀಗ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಲ್ಲದೆ, ಆಕೆ ಕತ್ತರಿಸಿದ ಮರ್ಮಾಂಗವನ್ನೂ ವಶಕ್ಕೆ ಪಡೆದಿದ್ದಾರೆ! ಹಾಗಂತ ಪೊಲೀಸರೇ ಹೇಳಿಕೊಂಡಿದ್ದಾರೆ. ಬಂಧಿತ ಮಹಿಳೆ ಸರಸು ಮತ್ತು ಜಗದೀಶನ್ ಒಂದೇ ಗಾರ್ಮೆಂಟ್ಸ್ ನಲ್ಲಿ ದುಡಿಯುತ್ತಿದ್ದರು. ಇವರಿಬ್ಬರೂ ಪ್ರೀತಿಸಿ ಮದುವೆಯಾಗಿ 14 ವರ್ಷಗಳ ದಾಂಪತ್ಯ ನಡೆಸಿದ್ದರು.
ಇದೀಗ ಒಬ್ಬ ಪುತ್ರ ಮತ್ತು ಮೂವರು ಹೆಣ್ಣು ಮಕ್ಕಳನ್ನು ಹೊಂದಿದ್ದಾರೆ. ಇವರಿಬ್ಬರ ನಡುವೆ ಆಗಾಗ ಕೌಟುಂಬಿಕ ಕಲಹವಾಗುತ್ತಿತ್ತು ಎನ್ನಲಾಗಿದೆ. ಇದು ತಾರಕಕ್ಕೇರಿ ಕೆಲವು ದಿನ ಸರಸು ತವರು ಮನೆಯಲ್ಲಿದ್ದಳು. ಆದರೆ ತವರು ಮನೆಯಲ್ಲಿದ್ದಾಗ ಈಕೆ ಬೇರೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದೆ ಎಂದು ಸರಸು ಮೇಲೆ ಪತಿ ಜಗದೀಶ್ ಆರೋಪಿಸಿದ್ದ.ಅಲ್ಲದೆ ತಾನು ಬೇರೊಂದು ಮದುವೆಯಾಗುವುದಾಗಿ ಹೇಳಿದ್ದ.
ಇದೇ ಕಾರಣಕ್ಕೆ ಜಗಳ ತಾರಕಕ್ಕೇರಿ ಸರಸು ತನ್ನ ಪತಿಯ ಮರ್ಮಾಂಗವನ್ನು ಚಾಕುವಿನಿಂದ ಕತ್ತರಿಸಿದ್ದಾಳೆ. ಆಕ್ರಂದನ ಕೇಳಿ ನೆರೆ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ