Select Your Language

Notifications

webdunia
webdunia
webdunia
webdunia

ಹೆತ್ತಮ್ಮನಿನಗೇ ಆ ಕಂದಮ್ಮ ಬೇಡವಾಗಿದ್ದೇಕೆ?!

ಹೆತ್ತಮ್ಮನಿನಗೇ ಆ ಕಂದಮ್ಮ ಬೇಡವಾಗಿದ್ದೇಕೆ?!
Bihar , ಗುರುವಾರ, 23 ಮಾರ್ಚ್ 2017 (12:41 IST)
ಬಿಹಾರ: ಮಗು ಎಂತಹಾ ಕುರೂಪಿಯೇ ಆಗಿರಲಿ. ಅಮ್ಮನ ಕಣ್ಣಿಗೆ ಮುದ್ದಾಗಿ ಕಾಣುತ್ತದಂತೆ. ಆದರೆ ಇಲ್ಲೊಬ್ಬಳು ಅಮ್ಮ ತನ್ನ ಮಗು ವಿಚಿತ್ರ ರೂಪದಲ್ಲಿರುವ ಕಾರಣಕ್ಕೆ ಮಗುವೇ ಬೇಡವೆನ್ನುತ್ತಿದ್ದಾಳೆ.

 

ಬಿಹಾರ ಮೂಲದ ಮುಸ್ಲಿಂ ಮಹಿಳೆಗೆ ಈಗಾಗಲೇ ನಾಲ್ಕು ಮಕ್ಕಳಿದ್ದಾರೆ. ಇದೀಗ ಐದನೇ ಮಗುವಿಗೆ ಜನ್ಮವಿತ್ತಿದ್ದಾಳೆ. ಆದರೆ ಆ ಮಗು ಸಾಮಾನ್ಯ ಮಗುವಿನಂತಿಲ್ಲ. ಚಿಕ್ಕ ತಲೆ, ದೊಡ್ಡ ಕಣ್ಣು ಹೊಂದಿದ್ದು, ಹಿಂದೂ ಧರ್ಮದ ದೇವಮಾನವನಂತಿದೆ.

 
ಇದೇ ಕಾರಣಕ್ಕೋ ಏನೋ, ಆ ವಿಚಿತ್ರ ಮಗುವನ್ನು ಸ್ವೀಕರಿಸಲು ಅಮ್ಮ ತಯಾರಿಲ್ಲ. ಆದರೆ ಈ ವಿಶೇಷ ಮಗು ದೇವರ ಪ್ರತಿರೂಪ ಎಂದುಕೊಂಡು ನಿತ್ಯವೂ ಹಲವು ಮಂದಿ ಬಂದು ವೀಕ್ಷಿಸಿ ಹೋಗುತ್ತಿದ್ದಾರೆ.

 
ವೈದ್ಯರ ಪ್ರಕಾರ ವಿಶೇಷ ಜೆನೆಟಿಕ್ ಸ್ಥಿತಿಯಿಂದ ಮಗು ಹೀಗೆ ಹುಟ್ಟಿದೆಯಂತೆ. ಏನೇ ಆದರೂ, ಹಿಂದೂ ದೇವರ ದೈವಾಂಶ ಸಂಭೂತನಂತೆ ಕಾಣುವ ಈ ಮಗುವನ್ನು ತಾಯಿ ಮಾತ್ರವಲ್ಲ, ಆಕೆಯ ಕುಟುಂಬದವರೂ ಸ್ವೀಕರಿಸಲು ತಯಾರಿಲ್ಲ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಯುವಕನ ಹೊಟ್ಟೆಯಲ್ಲಿ ಗರ್ಭಕೋಶ ಪತ್ತೆ