Daily Horoscope

Select Your Language

Notifications

webdunia
webdunia
webdunia
webdunia

ಗಂಡನ ಚಿತೆ ಆರುವ ಮೊದಲೇ ಅಜಿತ್ ಪವಾರ್ ಪತ್ನಿ ಉಪ ಮುಖ್ಯಮಮಂತ್ರಿಯಾಗಿದ್ದೇಕೆ: ಮಾಸ್ಟರ್ ಪ್ಲ್ಯಾನ್ ಯಾರದ್ದು

Sunetra Pawar
Photo Credit: X
ಮುಂಬೈ: ಮಹಾರಾಷ್ಟ್ರದಲ್ಲಿ ಮೊನ್ನೆಯಷ್ಟೇ ವಿಮಾನ ಪತನವಾಗಿ ಡಿಸಿಎಂ ಅಜಿತ್ ಪವಾರ್ ನಿಧನರಾಗಿದ್ದರು. ಇದಾಗಿ ಎರಡೇ ದಿನಕ್ಕೇ ಅವರ ಪತ್ನಿ ಉಪ ಮುಖ್ಯಮಂತ್ರಿಯಾಗಿ ಅವರ ಸ್ಥಾನಕ್ಕೆ ಬಂದಿದ್ದಾರೆ. ಇದರ ಹಿಂದಿನ ಮಾಸ್ಟರ್ ಪ್ಲ್ಯಾನ್ ಯಾರದ್ದು ಎಂಬ ಬಗ್ಗೆ ಈಗ ಗುಸು ಗುಸು ಚರ್ಚೆಯಾಗುತ್ತಿದೆ.
 

ಪತಿಯ ಚಿತೆ ಆರುವ ಮುನ್ನವೇ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದೆಲ್ಲಾ ಕೆಲವೇ ಗಂಟೆಗಳಲ್ಲಿ ನಡೆದು ಹೋಗಿತ್ತು. ಹಲವರು ಕನಿಷ್ಠ ಪಕ್ಷ ಅಜಿತ್ ಪವಾರ್ 11 ನೆಯ ದಿನದ ಕಾರ್ಯಕ್ರಮ ಮುಗಿಯುವವರೆಗಾದರೂ ಕಾಯಬಹುದಿತ್ತಲ್ಲವೇ ಎಂದೂ ಕಾಮೆಂಟ್ ಮಾಡಿದವರಿದ್ದಾರೆ.

ಆದರೆ ಸುನೇತ್ರಾ ಇಷ್ಟು ಆತುರವಾಗಿ ಡಿಸಿಎಂ ಆಗಿ ಅಧಿಕಾರ ಸ್ವೀಕರಿಸಿರುವುದರ ಹಿಂದೆ ಬಿಜೆಪಿ ಚಾಣಕ್ಷ್ಯ ಅಮಿತ್ ಶಾ ಮಾಸ್ಟರ್ ಪ್ಲ್ಯಾನ್ ಇದೆ ಎನ್ನಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ನಿಧನದ ನಂತರ ಅವರ ಎನ್ ಸಿಪಿ ಬಣ ಶರದ್ ಪವಾರ್ ಅವರ ಎನ್ ಸಿಪಿ ಬಣದೊಂದಿಗೆ ವಿಲೀನವಾಗುವ ಸಾಧ್ಯತೆಯಿತ್ತು.

ಇದು ನಡೆದಿದ್ದರೆ ಬಿಜೆಪಿಗೆ ದೊಡ್ಡ ಕಂಟಕವಾಗುತ್ತಿತ್ತು. ಹೀಗಾಗಿ ಸರ್ಕಾರಕ್ಕೆ ತೊಂದರೆಯಾಗಬಹುದು ಎಂದು ಅಮಿತ್ ಶಾ ತಕ್ಷಣವೇ ಸುನೇತ್ರಾ ಪವಾರ್ ರನ್ನು ಡಿಸಿಎಂ ಆಗಿ ಅಧಿಕಾರ ಸ್ವೀಕರಿಸುವಂತೆ ಮಾಡಿದರು ಎಂಬ ಚರ್ಚೆಯಾಗುತ್ತಿದೆ. ಅದೇನೇ ಇರಲಿ, ಇದು ಅಮಿತ್ ಶಾ ಮತ್ತೊಂದು ಮಾಸ್ಟರ್ ಸ್ಟ್ರೋಕ್ ಎನ್ನಲಾಗುತ್ತಿದ್ದು, ಎನ್ ಸಿಪಿ ಪವಾರ್ ಬಣವನ್ನು ತನ್ನ ತೆಕ್ಕೆಗೆ ಸೆಳೆಯಲು ಯತ್ನಿಸಿದ ಶರದ್ ಪವಾರ್ ಬಣಕ್ಕೆ ಠಕ್ಕರ್ ಕೊಟ್ಟಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

Union Budget 2026: ಆದಾಯ ತೆರಿಗೆ ವಂಚಿಸುವವರಿಗೆ ಶಾಕ್ ಕೊಟ್ಟ ನಿರ್ಮಲಾ ಸೀತಾರಾಮನ್