Select Your Language

Notifications

webdunia
webdunia
webdunia
webdunia

ನಾನ್ಯಾಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿ? : ಶಿವಕುಮಾರ್

ನಾನ್ಯಾಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿ? : ಶಿವಕುಮಾರ್
ನವದೆಹಲಿ , ಬುಧವಾರ, 17 ಮೇ 2023 (13:52 IST)
ನವದೆಹಲಿ : ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
 
ನವದೆಹಲಿಯಲ್ಲಿ ಖರ್ಗೆ ನಿವಾಸಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ನೀಡಲ್ಲ. ಇದೆಲ್ಲ ಸುಳ್ಳು. ಕಾಂಗ್ರೆಸ್ ಪಕ್ಷ ನನ್ನ ತಾಯಿ ಇದ್ದಂತೆ. ನಾನು ಯಾವುದೇ ಬೇಡಿಕೆ ಇಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು. 

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿ 3-4 ದಿನ ಕಳೆದರೂ ಇನ್ನೂ ಸಿಎಂ ಯಾರೆಂಬುದು ಕಗ್ಗಂಟಾಗಿ ಉಳಿದಿದೆ. ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಸಿಎಂ ಕುರ್ಚಿಗೆ ಭಾರೀ ಫೈಟ್ ನಡೆಯುತ್ತಿದ್ದು, ಇದೀಗ ಹೈಕಮಾಂಡ್ ಅಂಗಳ ತಲುಪಿದೆ. ಇಬ್ಬರು ನಾಯಕರೂ ಕೂಡ ದೆಹಲಿ ತಲುಪಿದ್ದು, ಇಂದು ಸಂಜೆಯೇ ಸಿಎಂ ಯಾರೆಂದು ಅನೌನ್ಸ್ ಮಾಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ನಲ್ಲಿ ಸಿಎಂ ಯಾರಾಗ್ತಾರೆ ನೋಡೋಣ-ಆರಗ ಜ್ಞಾನೇಂದ್ರ