ಜಾಮೀನು ಕೋರಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಕೈಗೆತ್ತಿಕೊಂಡ ಬಾಂಬೈ ಹೈಕೋರ್ಟ್, ರಾಷ್ಟ್ರೀಯ ತನಿಖಾ ದಳ ಪ್ರಕರಣವನ್ನು ಕೈ ಬಿಟ್ಟ ಬಳಿಕವೂ ಸಾಧ್ವಿ ಜೈಲಲ್ಲಿರುವುದೇಕೆ ಎಂದು ಪ್ರಶ್ನಿಸಿದೆ.
2008ರಲ್ಲಿ ನಡೆದ ಮಾಲೆಗಾಂವ್ ಸ್ಪೋಟಕ್ಕೆ ಸಂಬಂಧಿಸಿದಂತೆ ಠಾಕೂರ್ ಬಂಧಿಸಲ್ಪಟ್ಟಿದ್ದರು.
ಮಹಾರಾಷ್ಟ್ರ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಮ್ ಆಕ್ಟ್‌ಗೆ ಸಂಬಂಧಿತ ವಿಶೇಷ ಕೋರ್ಟ್ ಜೂನ್ 28 ರಂದು ಠಾಕೂರ್‌ಗೆ ಜಾಮೀನು ನೀಡಲು ನಿರಾಕರಿಸಿತ್ತು. ಹೀಗಾಗಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಹಿಂದಿನ ಎಲ್ಲಾ ಆದೇಶಗಳಮತ್ತು ತೀರ್ಪಿಗೆ ಸಂಬಂಧಿಸಿದ ಸಂಕಲನವನ್ನು ಒದಗಿಸಿ ಎಂದು ಎನ್‌ಐಎಗೆ, ನ್ಯಾಯಮೂರ್ತಿ ಎನ್.ಎಚ್.ಪಾಟೀಲ್ ಮತ್ತು ಪಿ.ಡಿ. ನಾಯ್ಕ ನೇತೃತ್ವದ ವಿಭಾಗೀಯ ಪೀಠ ಸೂಚನೆ ನೀಡಿದೆ.
ಎನ್ಐಎ ಈ ವರ್ಷದ ಆರಂಭದಲ್ಲಿ ಠಾಕೂರ್‌ಗೆ ಕ್ಲೀನ್ ಚಿಟ್ ನೀಡಿತ್ತು. ಆದರೆ ಮೇಲ್ನೋಟಕ್ಕೆ ಅವರ ವಿರುದ್ಧ ಸಾಕ್ಷ್ಯಗಳಿವೆ ಎಂದಿದ್ದ ವಿಚಾರಣಾ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ