Select Your Language

Notifications

webdunia
webdunia
webdunia
webdunia

ಯಾರ ಮುಡಿಗೆ ದೆಹಲಿ ಗದ್ದುಗೆ? ಮುನ್ನಡೆ ಯಾರಿಗೆ- ಹಿನ್ನಡೆ ಯಾರದ್ದು?

ಯಾರ ಮುಡಿಗೆ ದೆಹಲಿ ಗದ್ದುಗೆ? ಮುನ್ನಡೆ ಯಾರಿಗೆ- ಹಿನ್ನಡೆ ಯಾರದ್ದು?
, ಗುರುವಾರ, 23 ಮೇ 2019 (07:53 IST)
ಲೋಕಸಭೆ ಚುನಾವಣೆಯ ಮತಎಣಿಕೆ ಆರಂಭಗೊಂಡಿದೆ. ಎಕ್ಸಿಟ್ ಪೋಲ್ ನ ರಿಸಲ್ಟ್ ಬಳಿಕ ಗೆಲುವಿನ ಹುಮ್ಮಸ್ಸಿನಲ್ಲಿರುವ ಕೇಸರಿ ಪಡೆಗೆ ತಡೆವೊಡ್ಡಲು ಕೈ ಪಡೆ ಕಸರತ್ತು ನಡೆಸಿದೆ. ಯುಪಿಎ ಮೈತ್ರಿ ಕೂಟ ಅಧಿಕ ಸೀಟ್ ಗೆಲ್ಲುತ್ತಾ ಇಲ್ಲವೇ ಎನ್ ಡಿಎ ಪಕ್ಷಗಳು ಅಧಿಕಾರಕ್ಕೆ ಮತ್ತೆ ಬರುತ್ತವಾ ಅನ್ನೋದರ ಕುರಿತು ವೆಬ್ ದುನಿಯಾ ಕ್ಷಣ ಕ್ಷಣದ ಮಾಹಿತಿ ನಿಮ್ಮ  ಮುಂದಿಡುತ್ತಿದೆ.





ಬೆಳಗ್ಗೆ 8 ಕ್ಕೆ ಮತಎಣಿಕೆ ಪ್ರಾರಂಭ

ಮೊದಲು ಅಂಚೆಮತ ಪತ್ರ, ಇಟಿಬಿಎಸ್ ಎಣಿಕೆ

ಆ ಬಳಿಕ ಇವಿಎಂ ಮತ ಎಣಿಕೆ

ಇವಿಎಂ ಮತ ಎಣಿಕೆ ಬಳಿಕ ಪ್ರತಿ ವಿಧಾನಸಭಾ ಕ್ಷೇತ್ರವಾರು 5 ವಿವಿ ಪ್ಯಾಟ್ ಗಳನ್ನು ಆಯ್ಕೆಮಾಡಿ ಮತಚೀಟಿ ಎಣಿಕೆ
ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಧಿಕೃತವಾಗಿ ಚುನಾವಣಾಧಿಕಾರಿ ಫಲಿತಾಂಶ ಘೋಷಣೆ ಮಾಡುವರು

ರಾಜ್ಯದ ದೋಸ್ತಿ ಸರಕಾರದ ಹಣೆಬರಹ, ಭವಿಷ್ಯ ಕೂಡ ಈ ಲೋಕಸಭೆ ಚುನಾವಣೆ ಫಲಿತಾಂಶದ ಮೇಲೆ ಅವಲಂಬಿತವಾಗಿರುವುದರಿಂದ ಲೋಕ ಫಲಿತಾಂಶದತ್ತ ಎಲ್ಲರ ಚಿತ್ತ ಹರಿದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭೆ ಚುನಾವಣೆ ಫಲಿತಾಂಶದ ನೇರ ಪ್ರಸಾರ: ಯಾರಿಗೆ ಎಷ್ಟು ಸೀಟು ಇಲ್ಲಿದೆ ಡಿಟೇಲ್ಸ್