Publish Date: Wed, 25 Feb 2026 (12:20 IST)
Updated Date: Wed, 25 Feb 2026 (12:22 IST)
ನವದೆಹಲಿ: ಭಾರತದ ರಾಜಕಾರಣದಲ್ಲಿ ಈಗ ಹಲವು ಹೆಸರುಗಳು ಕೇಳಿಬರುತ್ತವೆ. ಆದರೆ ಸದ್ಯದ ರಾಜಕಾರಣಿಗಳ ಪೈಕಿ ಅತ್ಯಂತ ಬುದ್ಧಿವಂತ ರಾಜಕಾರಣಿ ಯಾರು ಎಂಬ ಪ್ರಶ್ನೆಗೆ ಸಿಗುವ ಉತ್ತರ ಕೇಳಿದ್ರೆ ನಿಮಗೇ ಅಚ್ಚರಿಯಾಗುತ್ತದೆ.
ಈಗೆಲ್ಲಾ ಜನ ಏನೇ ಅನುಮಾನಗಳಿದ್ದರೂ ಗೂಗಲ್ ಜೆಮಿನಿ ಬಳಿ ಕೇಳುತ್ತಾರೆ. ಅದೇ ರೀತಿ ಭಾರತದ ಬುದ್ಧಿವಂತ ರಾಜಕಾರಣಿ ಯಾರು ಎಂದು ಗೂಗಲ್ ಜೆಮಿನಿ ಬಳಿ ಕೇಳಿ ನೋಡಿ. ಅದು ಕೊಡುವ ಉತ್ತರ ನಿಮಗೇ ಅಚ್ಚರಿಯಾಗುತ್ತದೆ. ನೀವು ನರೇಂದ್ರ ಮೋದಿ ಎಂದೋ, ರಾಹುಲ್ ಗಾಂಧಿ ಎಂದೋ ಅಂದುಕೊಳ್ಳಬಹುದು. ಆದರೆ ಭಾರತದ ಅತ್ಯಂತ ಜಾಣ ರಾಜಕಾರಣಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ವಿದೇಶಾಂಗ ಸಚಿವ ಎಸ್ ಜೈಶಂಕರ್.
ಎಸ್ ಜೈಶಂಕರ್: ಭಾರತದ ರಾಯಭಾರಿಯಾಗಿ ಕೆಲಸ ಮಾಡಿ ಅನುಭವವಿರುವ ಡಾ ಎಸ್ ಜೈಶಂಕರ್ ಪಿಎಚ್ ಡಿ, ಎಂ.ಫಿಲ್. ಪದವೀಧರರು. ಜಾಗತಿಕ ವಿಚಾರದಲ್ಲಿ ಅತ್ಯಂತ ತೀಕ್ಷ್ಣ ಬುದ್ಧಿಯಿರುವ ಅವರು ಜಾಣ್ಮೆಯಿಂದ ಸಮಸ್ಯೆ ಬಗೆಹರಿಸುವಲ್ಲಿ ನಿಷ್ಣಾತರು.
ಶಶಿ ತರೂರ್: ಎರಡನೇ ಸ್ಥಾನದಲ್ಲಿರುವವರು ಕಾಂಗ್ರೆಸ್ ನಾಯಕ, ತಿರುವನಂತಪುರಂ ಸಂಸದ ಶಶಿ ತರೂರ್. ವಿಶ್ವ ಸಂಸ್ಥೆಯ ಸೆಕ್ರೆಟರಿ ಜನರಲ್ ಆಗಿದ್ದ ಅವರ ಇಂಗ್ಲಿಷ್ ಭಾಷೆಯ ಮೇಲಿನ ಹಿಡಿತ ಸದ್ಯಕ್ಕೆ ಯಾರಿಗೂ ಇಲ್ಲ. ಸ್ವತಃ ಸುಧಾಮೂರ್ತಿಯವರೇ ಒಮ್ಮೆ ಸಂದರ್ಶನವೊಂದರಲ್ಲಿ ಶಶಿ ತರೂರ್ ಇಂಗ್ಲಿಷ್ ಮಾತುಗಳನ್ನು ಕೇಳಿದರೆ ಅದರ ಅರ್ಥ ಹುಡುಕುವುದಕ್ಕೆ ಡಿಕ್ಷನ್ನರಿ ಹಿಡಿದುಕೊಳ್ಳಬೇಕು ಎಂದು ಹೊಗಳಿದ್ದರು. ಅತೀ ಕಿರಿಯ ವಯಸ್ಸಿನಲ್ಲಿ ಅಂದರೆ 22 ವರ್ಷ ವಯಸ್ಸಿನಲ್ಲೇ ಲಾ ಆಂಡ್ ಡಿಪ್ಲೊಮೆಸಿ ವಿಚಾರದಲ್ಲಿ ಪಿಎಚ್ ಡಿ ಮಾಡಿದ ಬುದ್ಧಿವಂತ ರಾಜಕಾರಣಿ ಅವರು.
ಪಳನಿವೇಲ್ ತ್ಯಾಗ ರಾಜನ್: ಇವರು ತಮಿಳುನಾಡಿನ ಮಾಹಿತಿ ತಂತ್ರಜ್ಞಾನ ಸಚಿವರು. ಹಾಲಿ ಮಧುರೈ ಸೆಂಟ್ರಲ್ ಕ್ಷೇತ್ರದ ಶಾಸಕರೂ ಹೌದು. ಎಂಐಟಿ ಪದವೀಧರ ಮತ್ತು ವಾಲ್ ಸ್ಟ್ರೀಟ್ ಇನ್ವೆಸ್ಟ್ ಮೆಂಟ್ ಬ್ಯಾಂಕರ್. ಅವರಿಗೆ ಆರ್ಥಿಕ ವಿಚಾರದಲ್ಲಿ ಅಪಾರವಾದ ಜ್ಞಾನವಿದೆ.
ಅಶ್ವಿನಿ ವೈಷ್ಣವ್: ಕೇಂದ್ರದ ಹಾಲಿ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಐಎಎಸ್ ಅಧಿಕಾರಿಯಾಗಿದ್ದವರು. ವಿದೇಶದಲ್ಲಿ ಎಂಬಿಎ ಪದವಿ ಪಡೆದಿದ್ದವರು. ತಾಂತ್ರಿಕ ವಿಚಾರದ ಬಗ್ಗೆ ಅವರಿಗೆ ಅಪಾರವಾದ ಜ್ಞಾನವಿದೆ. ಭಾರತದಲ್ಲಿ ಸೆಮಿಕಂಡಕ್ಟರ್ ವಲಯದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ.