ಪಠಾಣ್‌ಕೋಟ್ ವಾಯುನೆಲೆ ಮೇಲೆ ಪಾಕಿಸ್ತಾನದ ಪಾತ್ರವಿಲ್ಲವೆಂದಾದರೆ, ದಾಳಿಕೋರರು ಯಾರೆಂದು ಸ್ಪಷ್ಟಪಡಿಸಿ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಪ್ರಧಾನಿ ಮೋದಿ ಅವರಿಗೆ ಸವಾಲೆಸೆದಿದ್ದಾರೆ.
ಪಠಾಣ್ ಕೋಟ್ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವಿಲ್ಲ ಎಂದು ಎನ್ಐಎ ಕ್ಲೀನ್ ಚಿಟ್ ನೀಡಿರುವ ಹಿನ್ನೆಲೆಯಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ.
ಗೋವಾದ ರಾಜಧಾನಿ ಪಣಜಿಯಲ್ಲಿ ಮಾತನ್ನಾಡುತ್ತಿದ್ದ ಸಿಂಗ್, ಪಠಾಣ್‌ಕೋಟ್ ದಾಳಿಯಲ್ಲಿ ಪಾಕ್ ಪಾತ್ರವಿಲ್ಲ ಎಂದು ಎನ್ಎಸ್ಎ ಕ್ಲೀನ್ ಚಿಟ್ ನೀಡಿದೆ. ಹಾಗಾದರೆ ವಾಯುನೆಲೆ ಮೇಲೆ ದಾಳಿ ಮಾಡಿದ ಉಗ್ರರು ಯಾರೆಂದು ಪ್ರಧಾನಿ ಅಥವಾ ರಾಷ್ಟ್ರೀಯ ಭದ್ರತಾ ಸಲಹೆಗಾರರು ವಿವರಿಸಲಿ ಎಂದಿದ್ದಾರೆ.
ಈ ಬೆಳವಣಿಗೆ ರಾಜತಾಂತ್ರಿಕ ಮತ್ತು ಆಂತರಿಕ ಭದ್ರತೆಯ ಸಾರ್ವಕಾಲಿಕ ವೈಫಲ್ಯ ಎಂದಿರುವ ಮಾಜಿ ಕೇಂದ್ರ ಸಚಿವ, ಎನ್‌ಎಸ್ಎ ಮತ್ತು ಗೃಹ ಸಚಿವರು ಈ ವಿಷಯದಲ್ಲಿ ಶುದ್ಧರೆಂಬುದನ್ನು ಸಾಬೀತು ಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ದಾಳಿಯಲ್ಲಿ ಎಷ್ಟು ಜನ ಭಯೋತ್ಪಾದಕರು ಹತ್ಯೆಯಾದರು ಎಂಬುದು ಸಹ ಸರ್ಕಾರಕ್ಕೆ ತಿಳಿದಿಲ್ಲ. ಎನ್ಎಸ್ಎ ನೀಡಿರುವ ಅಂಕಿಅಂಶ ಮತ್ತು ನಿಜವಾಗಿ ಸಿಕ್ಕ ಉಗ್ರರ ಶವಗಳ ಸಂಖ್ಯೆಯಲ್ಲಿ ವ್ಯತ್ಯಾಶವಿದೆ ಎಂದು ಅವರು ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.