Select Your Language

Notifications

webdunia
webdunia
webdunia
webdunia

ಸಿಎಂ ವೇದಿಕೆಯಲ್ಲಿರುವಾಗಲೇ ಕ್ಯಾಂಡಿ ಕ್ರಷ್ ಆಡುತ್ತಿದ್ದ ಪೊಲೀಸರು!

ಸಿಎಂ ವೇದಿಕೆಯಲ್ಲಿರುವಾಗಲೇ ಕ್ಯಾಂಡಿ ಕ್ರಷ್ ಆಡುತ್ತಿದ್ದ ಪೊಲೀಸರು!
Patna , ಗುರುವಾರ, 29 ಜೂನ್ 2017 (11:25 IST)
ಪಾಟ್ನಾ: ಬಿಹಾರ ಸಿಎಂ ನಿತೀಶ್ ಕುಮಾರ್ ತಮ್ಮ ರಾಜ್ಯದ ಅಧಿಕಾರಿಗಳಿಗೆ ಮೂಗುದಾರ ಹಾಕಲು ಏನೇನೋ ಖಡಕ್ ಆದೇಶ ನೀಡುತ್ತಾರೆ. ಆದರೆ ಅದೇ ಸಿಎಂ ಎದುರು ಭದ್ರತೆಗೆ ನಿಯೋಜನೆಗೊಂಡ ಪೊಲೀಸರು ಮಾಡಿದ ಕೆಲಸ ಮಾತ್ರ ಟೀಕೆಗೆ ಗುರಿಯಾಗಿದೆ.

 
ಮಾದಕ ವಸ್ತು ಮಾಫಿಯಾ ಜಾಗೃತಿ ಕಾರ್ಯಕ್ರಮವೊಂದರಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಭಾಷಣ ಮಾಡುತ್ತಿದ್ದರು. ಸಭೆಯಲ್ಲಿ ಹಲವು ಉನ್ನತ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಆದರೆ ಇವರ ಗಮನ ಸಿಎಂ ಭಾಷಣದ ಕಡೆಗಿರಲಿಲ್ಲ. ಕೈಯಲ್ಲಿದ್ದ ಮೊಬೈಲ್ ಮೇಲೆ ಕಣ್ಣು ನೆಟ್ಟು ಕೂತಿದ್ದರು. ಮೊಬೈಲ್ ನಲ್ಲಿ ಕ್ಯಾಂಡಿ ಕ್ರಷ್ ಗೇಮ್ ಆಡುತ್ತಿದ್ದರು. ಇದೆಲ್ಲಾ ಅಲ್ಲಿದ್ದ ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿದೆ.

ಘಟನೆ ವರದಿಯಾಗುತ್ತಿದ್ದಂತೆ ಸಿಎಂ ನಿತೀಶ್ ಕುಮಾರ್ ತನಿಖೆಗೆ ಆದೇಶ ನೀಡಿದ್ದಾರೆ. ಸಾರ್ವಜನಿಕ ಕಾರ್ಯಕ್ರಮದಲ್ಲಿ ಎಚ್ಚರಿಕೆಯಿಂದ ಇರಬೇಕಾದ ಪೊಲೀಸರೇ ಈ ರೀತಿ ಬೇಜವಾಬ್ದಾರಿಯುತವಾಗಿ ನಡೆದುಕೊಂಡಿರುವುದು ಭಾರೀ ಟೀಕೆಗೆ ಗುರಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇಸ್ರೋ: ಜಿ ಸ್ಯಾಟ್‌-17 ಸಂವಹನ ಉಪಗ್ರಹ ಯಶಸ್ವಿ ಉಡಾವಣೆ