ಲಕ್ನೋ: ಸಿಎಂ ಯೋಗಿ ಆದಿತ್ಯನಾಥ್ ತಮಗೆ ಮುಖ್ಯಮಂತ್ರಿ ಪಟ್ಟ ಒಲಿಯುತ್ತದೆಂದು ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲವಂತೆ. ಯೋಗಿ ಸಿಎಂ ಆಗಬೇಕೆಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದು ಯಾವಾಗ ಗೊತ್ತಾ?
ಕೇವಲ ಒಂದು ದಿನ ಮುಂಚೆ. ಅಂದರೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಒಂದು ದಿನ ಮೊದಲಷ್ಟೇ ಯೋಗಿಗೆ ತಾವು ಸಿಎಂ ಆಗಬೇಕೆಂದು ಅಮಿತ್ ಶಾ ಕೇಳಿಕೊಂಡಿದ್ದರಂತೆ. ಹಾಗಂತ ಸ್ವತಃ ಯೋಗಿ ಆದಿತ್ಯನಾಥ್ ಹೇಳಿಕೊಂಡಿದ್ದಾರೆ.
ಒಂದು ವೇಳೆ ನಾನು ತಿರಸ್ಕರಿಸಿದ್ದರೆ, ಪಲಾಯನವಾದಿ ಎನಿಸಿಕೊಳ್ಳುತ್ತಿದ್ದೆ. ಅದಕ್ಕೆ ಒಪ್ಪಿಕೊಂಡೆ. ಹಾಗಾಗಿ ಮರುದಿನವೇ ಶಾಸಕಾಂಗ ಸಭೆಗೆ ನನ್ನಲ್ಲಿದ್ದ ಬಟ್ಟೆಯಲ್ಲೇ ಹೋದೆ ಎಂದು ಸಿಎಂ ಯೋಗಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ