Select Your Language

Notifications

webdunia
webdunia
webdunia
webdunia

ಮೋದಿ ಭ್ರಷ್ಟಾಚಾರ ಯಾವಾಗ ಬಹಿರಂಗಗೊಳಿಸುತ್ತೀರಾ? : ರಾಹುಲ್‌ಗೆ ಕೇಜ್ರಿ ಸವಾಲ್

PM Narendra Modi
ನವದೆಹಲಿ , ಶನಿವಾರ, 17 ಡಿಸೆಂಬರ್ 2016 (16:24 IST)
ಪ್ರಧಾನಿ ಮೋದಿ ವೈಯಕ್ತಿಕ ಭ್ರಷ್ಟಾಚಾರ ಎಸಗಿರುವ ಬಗ್ಗೆ ನಿಮ್ಮಲ್ಲಿದೆ ಎಂದು ಹೇಳಲಾದ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸುವಂತೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಮತ್ತೊಮ್ಮೆ ಒತ್ತಾಯಸಿದ್ದಾರೆ. 
"ರಾಹುಲ್ ಜಿ, ನೀವು ಯಾವಾಗ ಮೋದಿ ಭ್ರಷ್ಟಾಚಾರದ ಮಾಹಿತಿಯನ್ನು ಬಹಿರಂಗ ಪಡಿಸುತ್ತೀರಿ?", ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
 
ಪ್ರಧಾನಿ ಮೋದಿ ವೈಯಕ್ತಿಕ ಭ್ರಷ್ಟಾಚಾರದಲ್ಲಿ ತೊಡಗಿರುವ ಮಾಹಿತಿ ನನ್ನ ಬಳಿ ಇದೆ. ಅದನ್ನು ಲೋಕಸಭೆಯಲ್ಲಿ ಬಹಿರಂಗ ಪಡಿಸಲು ಬಯಸುತ್ತೇನೆ. ಆದರೆ ನನ್ನ ಮೇಲಿನ ಭಯದಿಂದ ಕೇಂದ್ರ ಸರ್ಕಾರ ನನಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ರಾಹುಲ್ ಗಾಂಧಿ ಕಳೆದೆರಡು ದಿನಗಳ ಹಿಂದೆ ಹೇಳಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿ ದೇಶದ ಜನತೆಯಲ್ಲಿ ಕ್ಷಮೆ ಕೇಳಲಿ: ಅನಂತಕುಮಾರ್