ಯುವತಿಯಿಂದ ಬಂತು ವಾಟ್ಸ್ಅಪ್ ವಿಡಿಯೋ! ಟೆಂಪ್ಟ್ ಆದ ಮುದುಕ ಅವಾಂತರ ಮಾಡಿಕೊಂಡ!

Webdunia
ಶುಕ್ರವಾರ, 23 ಜೂನ್ 2023 (11:45 IST)
ಯುವತಿಯೊಬ್ಬಳಿಂದ ಮೆಸೇಜ್ ಬಂತು ಅಂತಾ ಹಿಂದೆಮುಂದೆಯೂ ನೋಡದೆ ಟೆಂಪ್ಟ್ ಆಗಿದ್ದಾರೆ. ಯುವತಿಯಿಂದ ವಿಡಿಯೋ ಕರೆ ಬಂದಾಕ್ಷಣ ಆತ ನಖಶಿಖಾಂತ ಉತ್ಸುಕರಾದರು.

ಯುವತಿಯೊಬ್ಬಳು ಹೈದರಾಬಾದ್ನ 79 ವರ್ಷದ ವ್ಯಕ್ತಿಗೆ ವಾಟ್ಸಾಪ್ನಲ್ಲಿ ಸಂದೇಶ ಕಳುಹಿಸಿದ್ದಾಳೆ. ಆಕೆ ಯಾರು, ಏನು ವಿಷಯ ಅದ್ಯಾವುದನ್ನೂ ಯೋಚಿಸದೆ ವೃದ್ಧ ಮಹಾಶಯ ಹುಡುಗಿಯ ಜೊತೆ ಹರಟೆ ಹೊಡೆಯತೊಡಗಿದ.
ಬಳಿಕ ನಗ್ನಗೊಂಡು ವಿಡಿಯೋ ಕಾಲ್ ನಲ್ಲಿ ಮಾತನಾಡುವಂತೆ ಕೇಳಿದ್ದಾಳೆ. ಆದರೆ, ತಾನು ಹೊರಗಿದ್ದೇನೆ ಎಂದು ಹೇಳಿದಾಗ ಆಯ್ತು ಸ್ವಲ್ಪ ಹೊತ್ತುಬಿಟ್ಟು ಮಾಡಿ, ಆದರೆ ಬಾತ್ ರೂಂನಿಂದ ವಿಡಿಯೋ ಕಾಲ್ ಮಾಡುವಂತೆ ಆತನಿಗೆ ಹೇಳಿದ್ದಾಳೆ.

ಕಾಣದ ಆಮಿಷಕ್ಕೆ ಒಳಗಾದ ವೃದ್ಧ ಸೀದಾ ಮನೆಗೆ ಹೋಗಿ ಬಾತ್ ರೂಮ್ ಸೇರಿಕೊಂಡಿದ್ದಾನೆ. ಅಲ್ಲಿಂದಲೇ ವಿಡಿಯೋ ಕಾಲ್ ಮಾಡಿದ್ದಾನೆ. ಇನ್ನೇನಿದೆ, ಈತನಿಗೆ ಅಸಲಿ ಕತೆ ಗೊತ್ತಿಲ್ಲ. ಯಾಕೆಂದರೆ ಆ ಕಡೆಯಿಂದ ಅಂದರೆ ಯುವತಿ ಕಡೆಯವರು ಮುಂದಿದೆ ಅಸಲಿ ಆಟ ಅಂತಾ ವಿಡಿಯೋ ಕಾಲ್ ಅನ್ನು ಸ್ಕ್ರೀನ್ ರೆಕಾರ್ಡ್ ಮಾಡಿಕೊಂಡಿದ್ದಾರೆ.

ಬಳಿಕ ಅನಾಮಧೇಯರು ವೃದ್ಧನಿಗೆ ಕರೆ ಮಾಡಿ ತಮ್ಮ ರಸಿಕತೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಅದಕ್ಕೂ ಮುನ್ನ, ನಿಮ್ಮ ಕುಟುಂಬ ಸದಸ್ಯರಿಗೆ ವಿಡಿಯೋ ಕಳುಹಿಸುತ್ತೇವೆ ಎಂದು ಬ್ಲಾಕ್ ಮೇಲ್ ಮಾಡಿದ್ದಾರೆ. ಸ್ವಲ್ಪ ಸಮಯದ ನಂತರ ತಾನು ಪೊಲೀಸ್ ಅಧಿಕಾರಿ ಮಾತನಾಡುತ್ತಿರುವುದು ಎಂದು ಹೇಳಿಕೊಂಡು ಮತ್ತೊಬ್ಬ ವ್ಯಕ್ತಿ ಕರೆ ಮಾಡಿ ಪ್ರಕರಣ ದಾಖಲಿಸಲಾಗಿದೆ ಎಂದು ಬೆದರಿಕೆ ಹಾಕಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯ, ಡಿಕೆಶಿ ನಡುವಿನ ಪವರ್ ವಾರ್ ಮತ್ತೊಂದು ಹಂತಕ್ಕೆ: ಸಿಎಂ ಹೊಸ ಟ್ವೀಟ್ ನಲ್ಲಿ ಏನಿದೆ

ನಮ್ಮಪ್ಪ ಯಾವುದೇ ಹಗರಣ ಮಾಡಿಲ್ಲ, ಐದು ವರ್ಷವೂ ಅವರೇ ಸಿಎಂ: ಸಿದ್ದರಾಮಯ್ಯ ಪುತ್ರ ಯತೀಂದ್ರ

ಐಎಎಸ್ ಅಧಿಕಾರಿ ಮಹಂತೇಶ ಬೀಳಗಿ ಕುಟುಂಬಕ್ಕೆ ಉದ್ಯೋಗ ಕೊಡಲು ವಿಜಯೇಂದ್ರ ಸರ್ಕಾರಕ್ಕೆ ಪತ್ರ

ಡಿಕೆ ಶಿವಕುಮಾರ್ ಗೆ ಸಿಎಂ ಕಟ್ಟಿದರೆ ಹೈಕಮಾಂಡ್ ಗೆ ಶುರುವಾಗಿದೆ ಈ ಭಯ

ಮೋದಿ ಬರುತ್ತಿದ್ದಾರೆಂದು ಉಡುಪಿಯಲ್ಲಿ ಫುಲ್ ಆಕ್ಟಿವ್ ಆದ ಬಿಜೆಪಿ ನಾಯಕರು

ಮುಂದಿನ ಸುದ್ದಿ
Show comments