Select Your Language

Notifications

webdunia
webdunia
webdunia
webdunia

ಅನುಷ್ಕಾ ಶೆಟ್ಟಿಗೆ ನಿನ್ನೆ ಎಲೋನ್ ಮಸ್ಕ್ ಕೊಟ್ಟ ಗಿಫ್ಟ್ ಏನು?

ಅನುಷ್ಕಾ ಶೆಟ್ಟಿಗೆ ನಿನ್ನೆ ಎಲೋನ್ ಮಸ್ಕ್ ಕೊಟ್ಟ ಗಿಫ್ಟ್ ಏನು?
ನವದೆಹಲಿ , ಮಂಗಳವಾರ, 25 ಏಪ್ರಿಲ್ 2023 (10:22 IST)
ದಕ್ಷಿಣದ ಖ್ಯಾತ ತಾರೆ, ಕರ್ನಾಟಕ ಮೂಲದ ಅನುಷ್ಕಾ ಶೆಟ್ಟಿ ನಿಜವಾಗಲೂ ಅದೃಷ್ಟವಂತೆ. ಸಾಲು ಸಾಲು ಸಿನಿಮಾಗಳನ್ನೂ ಗೆದ್ದಿರುವ ಅವರು, ಇದೀಗ ಟ್ವಿಟರ್ ಸಂಸ್ಥೆಯ ಮಾಲೀಕನ ಮನಸೂ ಗೆದ್ದಿದ್ದಾರೆ.
 
ಈ ಕಾರಣದಿಂದಾಗಿಯೇ ಟ್ವಿಟರ್ ಸಂಸ್ಥೆಯ ಮಾಲೀಕ ಎಲೋನ್ ಮಸ್ಕ್ ನಿಂದ ಅನುಷ್ಕಾ ಉಡುಗೊರೆ ಪಡೆದಿದ್ದಾರೆ. ಎಲೋನ್ ಮಸ್ಕ್ ಗೂ ಅನುಷ್ಕಾಗೆ ಹೇಗೆ ಪರಿಚಯ ಅಂತ ಕೇಳಿದರೆ, ಅದಕ್ಕೆ ಉತ್ತರವಿಲ್ಲ. ಬಹುಶಃ ಅನುಷ್ಕಾ ಯಾರು ಎನ್ನುವುದು ಎಲೋನ್ ಮಸ್ಕ್ ಗೂ ಗೊತ್ತಿರಲಿಕ್ಕಿಲ್ಲ.

ಹಣಕೊಟ್ಟು ಚಂದಾದಾರರಾದ ವ್ಯಕ್ತಿಗಳಿಗೆ ಮಾತ್ರ ಟ್ವಿಟರ್ ನಲ್ಲಿ ಬ್ಲೂಟಿಕ್ ಸಿಗಲಿದೆ ಎಂದು ಮಸ್ಕ್ ಈ ಹಿಂದೆ ಪ್ರಕಟಿಸಿದ್ದರು. ಅದರಂತೆ ಹಣ ಪಾವತಿಸದ ಪ್ರತಿಯೊಬ್ಬರ ಖಾತೆಯಿಂದಲೂ ಬ್ಲೂಟಿಕ್ ಮಾಯವಾಗಿತ್ತು. ಇದನ್ನು ಕೆಲವರು ಸ್ವಾಗತಿಸಿದ್ದರೆ, ಹೆಚ್ಚಿನ ಸಂಖ್ಯೆಯ ಸಿಲೆಬ್ರಿಟಿಗಳು ತಟಸ್ಥರಾಗಿ ಉಳಿದಿದ್ದರು. ಬೆರಳೆಣಿಕೆಯ ಗಣ್ಯರಷ್ಟೇ ಹಣ ಪಾವತಿಸಿದ್ದರಿಂದ, ಟ್ವಿಟರ್ ಗೆ ಬೇರೆ ರೀತಿಯಲ್ಲಿ ಪರಿಣಾಮ ಬೀರಬಹುದು ಎಂದು ಎಲೋನ್ ಮತ್ತೊಂದು ಪ್ಲ್ಯಾನ್ ಮಾಡಿದ್ದರು. ಅದು ಅನುಷ್ಕಾಗೆ ವರವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಂಸಾಚಾರ : ಭಾರತೀಯರ ರಕ್ಷಣೆಗೆ ‘ಆಪರೇಷನ್ ಕಾವೇರಿ’