Publish Date: Thu, 29 Jun 2017 (10:52 IST)
Updated Date: Thu, 29 Jun 2017 (10:54 IST)
ನವದೆಹಲಿ: ಮೀರತ್ ನ ಕಾಂಗ್ರೆಸ್ ನಾಯಕ ವಿನಯ್ ಪ್ರಧಾನ್ ರಾಹುಲ್ ಗಾಂಧಿಯನ್ನು ಅವಹೇಳನಕಾರಿಯಾಗಿ ಕರೆದು ಪದಚ್ಯುತಗೊಂಡಿದ್ದರು. ಈ ಹಿನ್ನಲೆಯಲ್ಲಿ ಅವರು ಹೊಸದೊಂದು ಪ್ರತಿಜ್ಞೆ ಮಾಡಿದ್ದಾರೆ.
ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿಯನ್ನು ವಿರೋಧಿಗಳು ಪಪ್ಪು ಎಂದು ವ್ಯಂಗ್ಯವಾಗಿ ಕರೆಯುತ್ತಾರೆ. ಇದೀಗ ಪದಚ್ಯುತ ನಾಯಕ ದೇಶವನ್ನು ಪಪ್ಪು ರಹಿತ ದೇಶ ಮಾಡ್ತೀನಿ ಎಂದು ಪ್ರತಿಜ್ಞೆ ಮಾಡಿದ್ದಾರೆ.
ವ್ಯಾಟ್ಸ್ ಅಪ್ ನಲ್ಲಿ ರಾಹುಲ್ ಗಾಂಧಿಯನ್ನು ಪಪ್ಪು ಎಂದು ಸಂದೇಶ ಬರೆದ ತಪ್ಪಿಗೆ ವಿನಯ್ ರನ್ನು ಪಕ್ಷದಿಂದ ಹೊರಹಾಕಲಾಗಿತ್ತು. ‘ಈ ಪಕ್ಷದಲ್ಲಿ ಗಾಂಧಿ ಕುಟುಂಬದ ಬಗ್ಗೆ ಏನೇ ಮಾತನಾಡಿದರೂ ಅಪರಾಧಿಯಾಗಿ ಮಾಡಲಾಗುತ್ತದೆ. ನನ್ನ ಜೀವಮಾನವಿಡೀ ಪಕ್ಷಕ್ಕಾಗಿ ದುಡಿದಿದ್ದೇನೆ. ಕನಿಷ್ಠ ನನ್ನ ಅಭಿಪ್ರಾಯವನ್ನಾದರೂ ಕೇಳಬಹುದಿತ್ತು.
ಬೇರೆ ಯಾರೂ ಬೇಡ. ಪ್ರಧಾನಿ ಮೋದಿಯವರ ಕಾಂಗ್ರೆಸ್ ಮುಕ್ತ ಭಾರತ ನನಸಾಗಲು ‘ಪಪ್ಪು’ ರಾಹುಲ್ ಗಾಂಧಿಯೊಬ್ಬರೇ ಸಾಕು. ಅವರು ಇನ್ನೂ ತಮ್ಮ ಸೋಲಿನ ದಾಖಲೆಯನ್ನು ಮುಂದುವರಿಸಲಿದ್ದಾರೆ’ ಎಂದು ವಿನಯ್ ಟೀಕಾಪ್ರಹಾರ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ