Publish Date: Wed, 19 Apr 2017 (09:44 IST)
Updated Date: Wed, 19 Apr 2017 (09:46 IST)
ನವದೆಹಲಿ: ದೇಶ ಕಾಯುವ ಯೋಧರೆಂದರೆ ಹಾಗೆ. ಅವರು ಬಿಸಿಲು, ಚಳಿ ಮಳೆಗಾಳಿಗೆ ಜಗ್ಗುವವರಲ್ಲ. ಶತ್ರುಗಳ ನೋಡಿ ಹಿಂಜರಿಯುವವರಲ್ಲ. ಹಾಗೊಬ್ಬ ವೀರ ಯೋಧ ನೀಡಿದ ಹೇಳಿಕೆ ನಮ್ಮ ಎದೆಯುಬ್ಬುವಂತೆ ಮಾಡುತ್ತದೆ.
ಕಾಶ್ಮೀರದಲ್ಲಿ ನಡೆದ ಪ್ರತಿಭಟನೆಯಲ್ಲಿ ತನ್ನ ಮೇಲೆ ಕಲ್ಲು ತೂರಾಟ ನಡೆಸಿದ ಯುವಕರಿಗೆ ಯೋಧ ವಿಕಿ ವಿಶ್ವಕರ್ಮ ತಕ್ಕ ಸಂದೇಶ ರವಾನಿಸಿದ್ದಾರೆ. ತಾನು ಕಲ್ಲು ತೂರಾಟಕ್ಕೆಲ್ಲಾ ಹೆದರಿ ಓಡುವವನಲ್ಲ ಎಂದಿದ್ದಾರೆ.
ನನ್ನ ಕೊನೆಯ ಉಸಿರುವವರೆಗೂ ತಾಯ್ನಾಡಿಗಾಗಿ ಸೇವೆ ಸಲ್ಲಿಸುತ್ತೇನೆ. ಯಾವುದೇ ಶಕ್ತಿಗೂ ನನ್ನನ್ನು ಅಲುಗಾಡಿಸಲಾಗದು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಕಾಶ್ಮೀರ ಯುವಕರು ಈ ವೀರ ಯೋಧನ ಮೇಲೆ ಕಲ್ಲೆಸೆಯುತ್ತಿದ್ದರೆ, ದೇಶದ ಹಿತ ದೃಷ್ಟಿಯಿಂದ ಅವರಿಗೆ ಪ್ರತಿಕ್ರಿಯಿಸಲಿಲ್ಲ ಎಂದು ವಿಕಿ ಹೇಳಿದ್ದಾರೆ. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ