Select Your Language

Notifications

webdunia
webdunia
webdunia
webdunia

ರಾಮ ಸೇತು ರಚನೆ ಬಗ್ಗೆ ಕೇಂದ್ರ ಉತ್ತರ ಏನು?

ರಾಮ ಸೇತು ರಚನೆ ಬಗ್ಗೆ ಕೇಂದ್ರ ಉತ್ತರ ಏನು?
ನವದೆಹಲಿ , ಶನಿವಾರ, 24 ಡಿಸೆಂಬರ್ 2022 (13:21 IST)
ನವದೆಹಲಿ : ರಾಮ ಸೇತು ಇದೆಯೇ ಎಂದು ನಿಖರವಾಗಿ ಹೇಳುವುದು ಕಷ್ಟ ಸಾಧ್ಯ. ಆದರೆ ಅಲ್ಲಿ ಸೇತುವೆ ರೂಪದ ರಚನೆ ಇದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಉತ್ತರ ನೀಡಿದೆ.

ಹರ್ಯಾಣದ ಸ್ವತಂತ್ರ ಸಂಸದ ಕಾರ್ತಿಕೇಯ ಶರ್ಮಾ ಅವರು, ಈ ಹಿಂದಿನ ಸರ್ಕಾರ ರಾಮ ಸೇತು ಬಗ್ಗೆ ನಿರ್ಲಕ್ಷ್ಯ ವಹಿಸಿತ್ತು. ಈಗಿನ ಸರ್ಕಾರ ದೇಶದ ಗತಕಾಲದ ಚರಿತ್ರೆಗೆ ಸಾಕ್ಷಿಯಾಗಿರುವ ರಾಮ ಸೇತು ಬಗ್ಗೆ ವೈಜ್ಞಾನಿಕ ಸಂಶೋಧನೆಗೆ ಮುಂದಾಗಿದೆಯೇ ಎಂದು ಪ್ರಶ್ನೆ ಕೇಳಿದ್ದರು.

ಈ ಪ್ರಶ್ನೆಗೆ ಉತ್ತರ ನೀಡಿದ ಬಾಹ್ಯಾಕಾಶ ಖಾತೆಯ ರಾಜ್ಯ ಸಚಿವ ಜೀತೇಂದ್ರ ಸಿಂಗ್, 18 ಸಾವಿರ ವರ್ಷಗಳ ಹಿಂದೆ ನಿರ್ಮಾಣವಾಗಿರುವ ಸೇತುವೆಯ ಬಗ್ಗೆ ಈಗ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆ ಸೇತುವೆಯು ಸುಮಾರು 56 ಕಿಲೋಮೀಟರ್ಗಳಷ್ಟು ಉದ್ದವಾಗಿದ್ದು, ಇದನ್ನು ಕಂಡುಹಿಡಿಯಲು ನಮಗೆ ಕೆಲವು ಮಿತಿಗಳಿವೆ ಎಂದು ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರು ಮದುವೆಗೆ ಹೋಗುವ ಉಡುಪು ಧರಿಸುತ್ತಾರೆ : ತಾಲಿಬಾನ್