Webdunia - Bharat's app for daily news and videos

Install App

ಲೈಂಗಿಕ ತೃಪ್ತಿ ನೀಡುವಂತಹ ಕರೆಗಳಿಂದ ಕಂಗಾಲಾದ ಯುವತಿ ಮಾಡಿದ್ದೇನು?

Webdunia
ಗುರುವಾರ, 7 ಡಿಸೆಂಬರ್ 2023 (11:44 IST)
ಆಕೆಯ ನಗ್ನ ಭಾವಚಿತ್ರಗಳು ಮತ್ತು ವಿಡಿಯೋಗಳು  ಅಶ್ಲೀಲ ವೆಬ್ಸೈಟ್‌ನಲ್ಲಿ ಪ್ರಸಾರವಾಗುತ್ತಿವೆ ಎಂಬುದನ್ನು ತಿಳಿಯಲು ಆಕೆಗೆ ಹೆಚ್ಚು ದಿನ ಬೇಕಾಗಲಿಲ್ಲ. ಇದೀಗ ಮಾಜಿ ಪ್ರೇಮಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಲಕ್ನೋದ ಪ್ರತಿಷ್ಠಿತ ಕಾಲೇಜೊಂದರ  ಯುವತಿಯೋರ್ವಳ ಮೊಬೈಲ್‌ಗೆ ಪ್ರತಿದಿನ ಅಪರಿಚಿತರಿಂದ ಮೊಬೈಲ್ ಕರೆಗಳು ಬರತೊಡಗಿದವು. ತನಗೆ ಲೈಂಗಿಕ ತೃಪ್ತಿ ನೀಡುವಂತೆ ಕರೆ ಮಾಡುತ್ತಿದ್ದವ ಆಕೆಯನ್ನು ಪೀಡಿಸುತ್ತಿದ್ದ. ಆಕೆ ಆತನ ಕರೆಗಳನ್ನು ನಿರ್ಲಕ್ಷಿಸ ತೊಡಗಿದಾಗ ಆಕೆಗೆ ಶಾಕ್ ಕಾದಿತ್ತು. ಆ ಅನಾಮಿಕ ವ್ಯಕ್ತಿ ಆಕೆಯ ನಗ್ನ ಭಾವಚಿತ್ರವನ್ನು ವಾಟ್ಸ್- ಅಪ್ ಮೂಲಕ ಕಳುಹಿಸಿದ್ದ. 
 
ಈ ಕುರಿತು  ಯುವತಿಯ ಕುಟುಂಬ ಪೊಲೀಸರಿಗೆ ಮಾಹಿತಿ ನೀಡಿತು. ಇತ್ತೀಚಿಗೆ ಆಕೆಯಿಂದ ದೂರವಾಗಿದ್ದ ಪ್ರೇಮಿಯೇ ಇದನ್ನೆಲ್ಲ ಮಾಡುತ್ತಿದ್ದಾನೆಂದು ಒಂದೇ ದಿನದಲ್ಲಿ ಪೊಲೀಸರು ಪತ್ತೆ ಹಚ್ಚಿದರು. ಯುವತಿ ತನ್ನ ಮನೆಯಲ್ಲಿ ಬಟ್ಟೆ ಬದಲಾಯಿಸುತ್ತಿದ್ದಾಗ ಆಕೆಗೆ ಅರಿವಿಲ್ಲದೇ ಆತ ಪೋಟೋಗಳನ್ನು ಕ್ಲಿಕ್ಕಿಸಿದ್ದ ಮತ್ತು ಹುಡುಗಿಯ ಮಾನ ಹರಾಜು ಹಾಕುತ್ತೇನೆಂದು ಯುವತಿಯ ಕುಟುಂಬಕ್ಕೆ ಬೆದರಿಕೆ  ಹಾಕಿದ್ದ. ಆರೋಪಿ ಈಗ ಕಂಬಿಯ ಹಿಂದಿದ್ದಾನೆ. 
 
ಪೊಲೀಸರ ಪ್ರಕಾರ ಯುವತಿಗೆ ಕಳೆದ 2 ವರ್ಷಗಳ ಹಿಂದೆ 24 ವರ್ಷದ ಯುವಕನ ಜತೆ ಫೇಸ್‌ಬುಕ್ ಮೂಲಕ ಸ್ನೇಹ ಏರ್ಪಟ್ಟಿತ್ತು. ಪರಿಚಯ ಕೆಲವೇ ದಿನಗಳಲ್ಲಿ ಪ್ರೀತಿಯಾಗಿ ಬದಲಾಯಿತು.  ಆದರೆ ಮಗಳು ತಮ್ಮದೇ ಸಮುದಾಯದವನನ್ನು ಮದುವೆಯಾಗಬೇಕೆಂದು ಯುವತಿಯ ತಂದೆ ತಾಯಿಗಳು ಹಠ ಹಿಡಿದಾಗ ಆತ ಈ ಕೃತ್ಯಕ್ಕೆ ಮುಂದಾದ ಎಂದು ಪೊಲೀಸರು ತಿಳಿಸಿದ್ದಾರೆ.  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಡುರಸ್ತೆಗೆ ನುಗ್ಗಿ ಕಬ್ಬಿಗಾಗಿ ಲಾರಿ ಮೇಲೆ ದಾಳಿ ಮಾಡಿದ ಒಂಟಿ ಸಲಗ

ಇಂಡಿಯಾ ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ ಬಗ್ಗೆ ಅಮಿತ್ ಶಾ ಗಂಭೀರ ಆರೋಪ

ದಸರಾ ಉದ್ಘಾಟನೆಗೆ ಸೋನಿಯಾ ಗಾಂಧಿಗೆ ಪತ್ರ ವದಂತಿ: ಸಿಎಂ ರಿಯ್ಯಾಕ್ಷನ್ ಹೀಗಿತ್ತು

ಆನ್‌ಲೈನ್‌ ಬೆಟ್ಟಿಂಗ್, ಆಸ್ತಿ ಗಳಿಕೆ ಆರೋಪ: ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ವಶಕ್ಕೆ

ಮುಂಬೈನಿಂದ ಜೋಧಪುರಕ್ಕೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ರನ್‌ ವೇಯಲ್ಲೇ ನಿಲ್ಲಿಸಿದ್ಯಾಕೆ

ಮುಂದಿನ ಸುದ್ದಿ