ಯುಗಾದಿ ಸಂಭ್ರಮದಂದೇ ಆರ್‌ಎಸ್‌ಎಸ್‌ ಕಚೇರಿಗೆ ಭೇಟಿ ನೀಡಿದ ನರೇಂದ್ರ ಮೋದಿ ಮಾಡಿದ್ದೇನು

Sampriya
ಭಾನುವಾರ, 30 ಮಾರ್ಚ್ 2025 (13:28 IST)
Photo Courtesy X
ನಾಗ್ಪುರ: ಯುಗಾದಿ ಹಬ್ಬದ ಸಂಭ್ರಮದ ದಿನದಂದೇ ಪ್ರಧಾನಿ ನರೇಂದ್ರ ಮೋದಿ ಅವರು ನಾಗ್ಪುರದ ಸ್ಮೃತಿ ಭವನದಲ್ಲಿರುವ ಆರ್‌ಎಸ್‌ಎಸ್‌ನ ಕಚೇರಿಗೆ ಭೇಟಿ ನೀಡಿದರು.

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್‌, ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಇದೇ ವೇಳೆ ಇದ್ದರು. ಆರ್‌ಎಸ್‌ಎಸ್‌ನ ಕಚೇರಿ ಸಿಬ್ಬಂದಿಯನ್ನು ಭೇಟಿಯಾಗಿ ಅವರೊಂದಿಗೆ ಫೋಟೊ ತೆಗೆಸಿಕೊಂಡರು.

 ನಾಗ್ಲುರದ ರೇಶಿಮ್ ಭಾಗ್‌ನಲ್ಲಿರುವ ಡಾ. ಹೆಡಗೇವಾರ್ ಸ್ಮೃತಿ ಮಂದಿರಕ್ಕೆ(ಆರ್‌ಎಸ್‌ಎಸ್‌ ಕಚೇರಿ) ಭೇಟಿ ನೀಡಿದರು.  ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸಂಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್ ಹಾಗೂ ಎರಡನೇ ಸರಸಂಘ ಸಂಚಾಲಕ ಎಂ.ಎಸ್ ಗೋಲ್ವಾಲ್ಕರ್ ಅವರ ಸ್ಮಾರಕಗಳಿಗೆ ಗೌರವ ಸಲ್ಲಿಸಿದರು.

ಮೋದಿಯವರು ಪ್ರಧಾನಿಯಾದ ಬಳಿಕ ಇಲ್ಲಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. 2000ರ ಆಗಸ್ಟ್ 27ರಂದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಡಾ. ಹೆಡಗೇವಾರ್ ಸ್ಮೃತಿ ಮಂದಿರಕ್ಕೆ ಭೇಟಿ ನೀಡಿದ್ದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡಾ ಸಿಎನ್ ಮಂಜುನಾಥ್ ಪ್ರಕಾರ ಹೃದಯಾಘಾತಕ್ಕೆ ಇದೊಂದು ಕಾರಣ ಸಾಕು

eBay ಬೆಂಗಳೂರು ಟೆಕ್ ಇನೊವೇಷನ್ ಹಬ್‌ಗೆ ನೇತೃತ್ವ ವಹಿಸಲು ಮೃಣಾಲ್ ಚಟರ್ಜಿ ನೇಮಕ

ಹಿಂದೂ ಧರ್ಮವಲ್ಲ ಬೈಗುಳದ ಶಬ್ಧ, ಬ್ರಾಹ್ಮಣರು ಗುಲಾಮರಾಗಿಸಲು ಹುಟ್ಟುಹಾಕಿದ್ದು: ನಿವೃತ್ತ ಜಡ್ಜ್

ಸಿಎಂ ಮಗ ಎಂಬ ಕಾರಣಕ್ಕೆ ಯತೀಂದ್ರ ವಿರುದ್ಧ ಕ್ರಮ ಇಲ್ವಾ: ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ಏನು

ಪುತ್ರ ಯತೀಂದ್ರನಿಗೇ ಸಿದ್ದರಾಮಯ್ಯ ಕೊಟ್ಟ ವಾರ್ನಿಂಗ್ ಏನು ಗೊತ್ತಾ

ಮುಂದಿನ ಸುದ್ದಿ
Show comments