ಬೆಂಗಳೂರು : ಮಲತಾಯಿ ಧೋರಣೆ ಬೇಡ , ಹೆಚ್ಚು ಪರಿಹಾರ ಕೊಡಿ ಎಂದ ಸಿದ್ಧರಾಮಯ್ಯ ಅವರಿಗೆ ಸಚಿವ ಶ್ರೀಮಂತ್ ಪಾಟೀಲ್ ಖಡಕ್ ಉತ್ತರ ನೀಡಿದ್ದಾರೆ.
									
										
								
																	
ಕೈಮಗ್ಗ ನೇಕಾರರು ಬಹಳ ಸಂಕಷ್ಟದಲ್ಲಿ ಇದ್ದಾರೆ. ರೈತರು ಮತ್ತು ನೇಕಾರರು ಎರಡು ಕಣ್ಣು ಎಂದು ಹೇಳ್ತಾರೆ. ಕೊರೊನಾ ಟೈಮ್ ಲ್ಲಿ ಬೇರೆ ವಲಯ ಕಾರ್ಮಿಕರಿಗೆ ಹಣ ಜಮೆ ಮಾಡಿದ್ದಾರೆ.  ನೇಕಾರರಿಗೆ 2 ಸಾವಿರ ಪರಿಹಾರ ಕೊಟ್ಟಿದ್ದಾರೆ. ಮಲತಾಯಿ ಧೋರಣೆ ಬೇಡ , ಹೆಚ್ಚು ಪರಿಹಾರ ಕೊಡಿ ಎಂದು ಸರ್ಕಾರಕ್ಕೆ  ಸಿದ್ಧರಾಮಯ್ಯ  ಹೇಳಿದ್ದಾರೆ.
									
			
			 
 			
 
 			
			                     
							
							
			        							
								
																	ಇದಕ್ಕೆ ಉತ್ತರಿಸಿದ  ಸಚಿವ ಶ್ರೀಮಂತ್ ಪಾಟೀಲ್, ನೇಕಾರರಿಗೆ 1ಲಕ್ಷದವರೆಗೂ ಸಾಲ ಮನ್ನಾ ಮಾಡಿದ್ದೇವೆ . ಸಹಕಾರ ಸಂಘಗಳಿಂದ ಸಾಲ ಸಿಗುವ ಕೆಲಸ ಮಾಡಿದ್ದೇವೆ. ಕಾರ್ಮಿಕರಿಗೆ ಪ್ರತಿ ವರ್ಷ 2 ಸಾವಿರ ರೂ. ಕೊಡ್ತೇವೆ ಎಂದು ತಿಳಿಸಿದ್ದಾರೆ.