ಶಶಿಕಲಾ ನಟರಾಜನ್ ಜೈಲುಪಾಲಾದರೂ ಅವರ ಬಣ ಸರ್ಕಾರ ರಚನೆಯಲ್ಲಿ ತೊಡಗಿರುವುದು ಈಗಾಗಲೇ ರಾಜೀನಾಮೆ ನೀಡಿರುವ ಪನ್ನೀರ್ ಸೆಲ್ವಂ ಬಣಕ್ಕೆ ನುಂಗಲಾರದ ತುತ್ತಾಗಿದೆ.ಶತಾಯಗತಾಯ ಪಳನಿ ಮುಖ್ಯಮಂತ್ರಿಯಾಗುವುದನ್ನು ತಡೆಯಲು ರಾಜಕೀಯ ತಂತ್ರಗಾರಿಕೆಯಲ್ಲಿ ಮುಳುಗಿರುವ ಪನ್ನೀರ್ ಬೆಂಬಲಿಗರು ಮತ್ತೀಗ ಎಐಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ನಟರಾಜನ್ ಆಯ್ಕೆ ಪ್ರಶ್ನಿಸಿ ಚುನಾವಣಾ ಆಯೋಗದ ಮೆಟ್ಟಿಲೇರಿದ್ದಾರೆ.
ಪನ್ನೀರ್ ಬೆಂಬಲಿಗರಾಗಿರುವ ರಾಜ್ಯಸಭಾ ಸದಸ್ಯ ಮೈತ್ರಿಯನ್ ಈ ಕುರಿತು ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದು ಷ ಅದನ್ನು ಸ್ವೀಕರಿಸಿರುವ ಆಯೋಗ ಇಂದೇ ವಿಚಾರಣೆಯನ್ನು ನಡೆಸಿ ತೀರ್ಪು ಪ್ರಕಟಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಇನ್ನೊಂದೆಡೆ ಎಐಎಡಿಎಂಕೆ ಶಶಿಕಲಾ ಕುಟುಂಬ ತೆಕ್ಕೆಗೆ ಹೋಗಲು ಯಾವುದೇ ಕಾರಣಕ್ಕೂ ನಮ್ಮ ಬಣ ಬಿಡುವುದಿಲ್ಲ ಎಂದು ಒ.ಪನ್ನೀರ್ ಸೆಲ್ವಂ ಗುಡುಗಿದ್ದಾರೆ.