Webdunia - Bharat's app for daily news and videos

Install App

ಯೂಟ್ಯೂಬ್​​ನಲ್ಲಿ ವಿಡಿಯೋ ನೋಡಿಕೊಂಡು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ!

Webdunia
ಗುರುವಾರ, 28 ಅಕ್ಟೋಬರ್ 2021 (13:32 IST)
17 ವರ್ಷದ ಹುಡುಗಿ ಯೂಟ್ಯೂಬ್ನಲ್ಲಿ ವಿಡಿಯೋ ನೋಡಿ, ಮಗುವಿಗೆ ಜನನ ನೀಡಿದ ಘಟನೆ ಕೇರಳದಲ್ಲಿ ನಡೆದಿದೆ. ಮಗಳು ಗರ್ಭಿಣಿ ಎಂಬುದು ತಂದೆ-ತಾಯಿಗೂ ಗೊತ್ತಿಲ್ಲ.
ಈಕೆ ತನ್ನ ಕೋಣೆಯಲ್ಲಿ ಲಾಕ್ ಮಾಡಿಕೊಂಡು, ಮಗುವನ್ನು ಹೆರುವ ವಿಧಾನವನ್ನು ಯೂಟ್ಯೂಬ್ನಲ್ಲಿ ನೋಡಿಕೊಂಡು ಹೆತ್ತಿದ್ದಾಳೆ. ಹಾಗೇ, ಹೆರಿಗೆಯಾದ ಮೇಲೆ ಕೂಡು ಮೂರು ದಿನ ಕೋಣೆಯಲ್ಲೇ ಇದ್ದಳು.
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಅಕ್ಟೋಬರ್ 24ರಂದು ಈ ಘಟನೆ ನಡೆದಿದೆ. ಅಪ್ಪ-ಅಮ್ಮನಿಗೆ ಗೊತ್ತಿಲ್ಲದೆ ಹೆರಿಗೆ ಮಾಡಿಕೊಂಡಿದ್ದ  ಹುಡುಗಿ ಒಂದು ಕೋಣೆಯಲ್ಲಿ ತನ್ನನ್ನು ತಾನು ಲಾಕ್ ಮಾಡಿಕೊಂಡಿದ್ದಳು. ಆದರೆ ಮಗು ಅಳುವ ಶಬ್ದ ಕೇಳಿದ ಆ ಹುಡುಗಿಯ ತಾಯಿ ಬಾಗಿಲು ಬಡಿದಿದ್ದಾರೆ. ಕೋಣೆ ಬಾಗಿಲು ತೆರೆಯುತ್ತಿದ್ದಂತೆ ತಂದೆ-ತಾಯಿ ಇಬ್ಬರೂ ಶಾಕ್ ಆಗಿದ್ದಾರೆ. ಹಾಗೇ ಬಾಲಕಿ ಮತ್ತು ಆಕೆಯ ಶಿಶು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ.  ಇನ್ನೂ 17ವರ್ಷ ಆಗಿದ್ದರಿಂದ ಹುಡುಗಿ ಅಪ್ರಾಪ್ತೆಯೆಂದೇ ಪರಿಗಣಿಸಲ್ಪಡುತ್ತಾಳೆ. ಆಸ್ಪತ್ರೆಯವರು ವಿಷಯವನ್ನು ಮಕ್ಕಳ ಕಲ್ಯಾಣ ಸಮಿತಿಗೆ ತಿಳಿಸಿದ್ದಾರೆ. ಸಮಿತಿಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಬಂದು ವಿಚಾರಣೆ ಮಾಡಿದಾಗ ಯುವತಿ, ಪಕ್ಕದ ಮನೆಯ 21ವರ್ಷದ ಯುವಕನೇ ತನ್ನ ಮಗುವಿನ ತಂದೆ ಎಂದು ಹೇಳಿಕೊಂಡಿದ್ದಾಳೆ. ಅಷ್ಟೇ ಅಲ್ಲ, ಯೂಟ್ಯೂಬ್  ನೋಡಿ ಮಗುವಿಗೆ ಜನ್ಮ ನೀಡು. ಹೊಕ್ಕುಳಬಳ್ಳಿಯನ್ನು ಕತ್ತರಿಸುವ ವಿಧಾನವೂ ಅದರಲ್ಲೇ ಇರುತ್ತದೆ ಎಂದೂ ತನಗೆ ಹೇಳಿದ್ದಾಗಿ ಪೊಲೀಸರ ಎದುರು ಹೇಳಿಕೊಂಡಿದ್ದಾಳೆ.  ಹುಡುಗಿ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಯುವಕನನ್ನು ಬಂಧಿಸಿ, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಮಾನದಲ್ಲಿ ಯಾವಾಗಲೂ ಎಲ್ಲಿ ಕೂತರೆ ಸೇಫ್ ಇಲ್ಲಿದೆ ನೋಡಿ ವಿವರ

Karnataka Weather: ಜೂನ್ 16 ರವರೆಗೂ ಈ ಜಿಲ್ಲೆಗಳ ಹವಾಮಾನ ತಪ್ಪದೇ ಗಮನಿಸಿ

ಅಹಮ್ಮದಾಬಾದ್ ವಿಮಾನ ದುರಂತದಲ್ಲಿ ಸಾವಿಗೀಡಾದವರ ಒಟ್ಟು ಸಂಖ್ಯೆ ಇಲ್ಲಿದೆ

ಕೇರಳದ ರಂಜಿತಾ ಸಾವಿನ ಅಪಹಾಸ್ಯ ಮಾಡಿದ ಉಪ ತಹಶೀಲ್ದಾರ್ ಸಸ್ಪೆಂಡ್

Air India Plane Crash: ಮೃತದೇಹಗಳನ್ನು ಗುರುತಿಸುವುದು ಹೇಗೆ ಇಲ್ಲಿದೆ ಪ್ರಕ್ರಿಯೆ

ಮುಂದಿನ ಸುದ್ದಿ
Show comments